ಕೊರೋನಾ ಭೀತಿ: 35 ಲಕ್ಷ ಕೂಲಿ ಕಾರ್ಮಿಕರಿಗೆ ಭತ್ಯೆ ನೀಡಲು ಯೋಗಿ ಸರ್ಕಾರ ಪ್ಲಾನ್..!

-masthmagaa.com:

ಉತ್ತರ ಪ್ರದೇಶ: ವಿಶ್ವದೆಲ್ಲೆಡೆ ಕೊರೋನಾ ಭೀತಿ ಸದ್ದು ಮಾಡುತ್ತಿದ್ದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ 23ಕ್ಕೆ ಏರಿಕೆಯಾಗಿರೋದ್ರಿಂದ ಪ್ರಮುಖ ನಗರಗಳು ಸ್ತಬ್ಧಗೊಂಡಿವೆ. ಜೊತೆಗೆ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದ್ರಿಂದಾಗಿ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅವರ ದಿನನಿತ್ಯದ ಅಗತ್ಯತೆಗಳ ಪೂರೈಕೆಗೆ ಸಹಾಯ ಮಾಡಲು ಯೋಗಿ ಸರ್ಕಾರ ಮುಂದಾಗಿದೆ.

ದಿನನಿತ್ಯದ 15 ಲಕ್ಷ ಕೂಲಿ ಕಾರ್ಮಿಕರಿಗೆ ಮತ್ತು ರಾಜ್ಯದ 20.37 ಲಕ್ಷ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ತಲಾ 1000 ರೂ.ಗಳನ್ನು ನೀಡೋದಾಗಿ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.  ಅಲ್ಲದೆ, ಕೊರೋನಾ ಭೀತಿಯಿಂದ ಬೀದಿ ಬದಿ ವ್ಯಾಪಾರವೂ ಬಂದ್ ಆಗಿದ್ದು, ಅವರಿಗೂ 1000 ರೂಪಾಯಿ ನೀಡಲಾಗುವುದು. ಈ ಸಹಾಯ ಮೊತ್ತವನ್ನು ಕಾರ್ಮಿಕರ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply