ಗುಣಮುಖರಾದವರಲ್ಲಿ ಚೀನಾ ನಂ.1… ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ..?

masthmagaa.com:

ಚಿಕಿತ್ಸೆ ಇಲ್ಲದ ಕೊರೋನಾ ಕಾಯಿಲೆಗೆ ಇಡೀ ವಿಶ್ವದಲ್ಲಿ 29 ಲಕ್ಷ ಜನ ತುತ್ತಾಗಿದ್ದಾರೆ ಅಂತ ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ತಿಳಿಸಿದೆ. ಈ ಪೈಕಿ 2 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದು, 8 ಲಕ್ಷ ಜನ ಗುಣಮುಖರಾಗಿದ್ದಾರೆ. ಜಾಗತಿಕವಾಗಿ ಗುಣಮುಖರಾದವರ ಪ್ರಮಾಣ ಶೇ. 28 ರಷ್ಟಿದೆ. ಇದು ಚೀನಾ, ಇರಾನ್, ಸ್ವಿಜರ್ಲ್ಯಾಂಡ್​ನಂತಹ ದೇಶಗಳ ರಿಕವರಿ ರೇಟ್​ಗಿಂತ ತುಂಬಾ ಕಮ್ಮಿ.

ಕೊರೋನಾ ಸೋಂಕಿನಿಂದ ಗುಣಮುಖವಾದ ದೇಶಗಳ ಪಟ್ಟಿಯಲ್ಲಿ ( 25,000ಕ್ಕೂ ಹೆಚ್ಚು ಪ್ರಕರಣ) ಚೀನಾ 94% ರಿಕವರಿ ರೇಟ್​ನೊಂದಿಗೆ ಮೊದಲ ಸ್ಥಾನದಲ್ಲಿದೆ. ನೆದರ್ಲ್ಯಾಂಡ್​ 0.27% ರಿಕವರಿ ರೇಟ್​ನೊಂದಿಗೆ ಕೊನೇ ಸ್ಥಾನದಲ್ಲಿದೆ. ಭಾರತ ಶೇ. 22ರಷ್ಟು ರಿಕವರಿ ರೇಟ್​ನೊಂದಿಗೆ 13ನೇ ಸ್ಥಾನದಲ್ಲಿದೆ ಅಂತ ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಮಾಹಿತಿ ನೀಡಿದೆ.

ಹೆಚ್ಚು ರಿಕವರಿ ರೇಟ್ ಹೊಂದಿರುವ ದೇಶಗಳು ( 25,000ಕ್ಕೂ ಹೆಚ್ಚು ಪ್ರಕರಣ): 

1. ಚೀನಾ – 94%

2. ಇರಾನ್ – 76%

3. ಸಿಜರ್ಲ್ಯಾಂಡ್​ – 75%

4. ಜರ್ಮನಿ – 70%

5. ಬ್ರೆಜಿಲ್ – 49%

6. ಸ್ಪೇನ್ – 43%

7. ಕೆನಡಾ – 35%

8. ಇಟಲಿ – 33%

9. ಪೆರು – 32%

10. ಫ್ರಾನ್ಸ್ – 28%

11. ಟರ್ಕಿ – 24%

12. ಬೆಲ್ಜಿಯಂ – 23%

13. ಭಾರತ – 22%

14. ಅಮೆರಿಕ – 11%

15. ರಷ್ಯಾ – 8%

16. ಬ್ರಿಟನ್ – 0.51%

17. ನೆದರ್ಲ್ಯಾಂಡ್​ – 0.27%

-masthmagaa.com

Contact Us for Advertisement

Leave a Reply