ದೆಹಲಿಯ ಹಾಟ್​​ಸ್ಪಾಟ್​​ಗಳಲ್ಲಿ ಕೊರೋನಾ ಓಡಿಸಲು ಜಪಾನ್ ವಾಹನ..!!

masthmagaa.com

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಅಬ್ಬರ ಜೋರಾಗಿದೆ. ಕಳೆದ 24 ಗಂಟೆಯಲ್ಲಿ 356 ಸೋಂಕಿತರು ಕಂಡು ಬಂದಿದ್ದಾರೆ. ಕೊರೋನಾ ತಡೆಗೆ ಎಷ್ಟೇ ಕ್ರಮಗಳನ್ನ ಕೈಗೊಂಡರೂ ಕೊರೋನಾ ಅಟ್ಟಹಾಸ ನಿಲ್ಲದಿರುವುದು ಕೇಜ್ರಿವಾಲ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಜಪಾನ್ ಮೂಲದ 60 ಸ್ಯಾನಿಟೈಸರ್ ಮಶೀನ್‌ಗಳನ್ನು ಹಾಟ್‌ಸ್ಪಾಟ್ ಏರಿಯಾಗಳಲ್ಲಿ ಬಳಕೆ ಮಾಡ್ತಿದ್ದಾರೆ. ಜಲ ಮಂಡಳಿ ಇದರ ನೇತೃತ್ವ ಹೊತ್ತುಕೊಂಡಿದ್ದು, ಕೊರೋನಾ ರೆಡ್‌ಝೋನ್ ಏರಿಯಾಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಕಾರ್ಯ ಚುರುಕುಗೊಂಡಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. WHO ಮಾರ್ಗಸೂಚಿ ಪ್ರಕಾರ ಸ್ಯಾನಿಟೈಸರ್‌ನಲ್ಲಿ ಸೋಡಿಯಮ್ ಹೈಪೊಕ್ಲೊರಿಟ್ ಶೇ.0.5ರಷ್ಟು ಇರಲಿದೆಯಂತೆ. ಹೀಗಾಗಿ ದೆಹಲಿ ಸಿಎಂ ಕೇಜ್ರಿವಾಲ್​​ ಕೊರೋನಾ ಹಾಟ್​ಸ್ಪಾಟ್​​​ಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆಗೆ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply