ಸದ್ಯದಲ್ಲೇ ಬರಲಿದೆ ಕೊರೋನಾ ಔಷಧಿ.. ಅಮೆರಿಕಾದ ಸಂಸ್ಥೆ ಭರವಸೆ

masthmagaa.com:

ಅಮೆರಿಕ:ಕೊರೋನಾ ವೈರಸ್​​​​​​ಗೆ ಸದ್ಯದಲ್ಲೇ ಔಷಧಿ ಕಂಡು ಹಿಡಿಯಲಾಗುತ್ತೆ. ಅಮೆರಿಕಾದ ಔಷಧಿ ಕಂಪನಿಯೊಂದು ದೀರ್ಘಕಾಲದಿಂದ ಕೊರೋನಾಗೆ ಮದ್ದು ಕಂಡು ಹಿಡಿಯಲು ಪರೀಕ್ಷೆ ನಡೆಸುತ್ತಿದೆ. ಇದೀಗ ಈ ಸಂಸ್ಥೆ ಸದ್ಯದಲ್ಲೇ ಔಷಧಿ ಕಂಡು ಹಿಡಿಯಲಿದ್ದು, ಬೇಸಿಗೆಯೊಳಗೆ ಸಾಕಷ್ಟು ಪ್ರಮಾಣದಲ್ಲಿ ಔಷಧಿ ಉತ್ಪಾದಿಸುತ್ತೇವೆ ಎಂದು ಘೋಷಿಸಿದೆ. ಅಲ್ಲದೆ ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್​​ಚೇಂಜ್ ಆಯೋಗಕ್ಕೆ ಈ ಕುರಿತು ವರದಿ ಸಲ್ಲಿಸಿದೆ. ಈ ಸಂಸ್ಥೆ ಕೋವಿಡ್-19 ನಿರೋಧಕ ಔಷಧಿಯನ್ನು mRNA-1273 ಹೆಸರಿನಲ್ಲಿ ಅಭಿವೃದ್ಧಿಪಡಿಸುತ್ತಿದೆ. ಅಮೆರಿಕಾದ ವಾಕ್ಸಿನ್ ರಿಸರ್ಚ್ ಸೆಂಟರ್ ಮತ್ತು ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಅಲರ್ಜಿ & ಇನ್ಫೆಕ್ಶಿಯಸ್ ಡಿಸೀಜ್​​ನ ವಿಜ್ಞಾನಿಗಳ ಸಂಶೋಧನೆಯ ಆಧಾರದಲ್ಲಿ ಈ ಔಷಧಿ ತಯಾರಿಸಲಾಗುತ್ತಿದೆ.

-masthmagaa.com

Contact Us for Advertisement

Leave a Reply