ಮೊಹ್ಮದ್ ಬಿನ್ ಸಲ್ಮಾನ್ ಸೂಚನೆ ಮೇರೆಗೆ ಜಮಾಲ್ ಖಶೋಗಿ ಹತ್ಯೆ!

masthmagaa.com:

ಅಮೆರಿಕ: ವಾಷಿಂಗ್ಟನ್ ಪೋಸ್ಟ್​​ ಪತ್ರಿಕೆಯ ಸೌದಿ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಸಂಬಂಧ ಅಮೆರಿಕ ಗುಪ್ತಚರ ಇಲಾಖೆಯ ಸ್ಫೋಟಕ ವರದಿ ಬಹಿರಂಗವಾಗಿದೆ. ಇದ್ರಲ್ಲಿ ಸೌದಿ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್ ಸೂಚನೆ ಮೇರೆಗೆ ಹತ್ಯೆ ಸಂಚು ನಡೆದಿತ್ತು ಅಂತ ಹೇಳಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅಮೆರಿಕ ನೇರಾನೇರವಾಗಿ ಜಮಾಲ್ ಹತ್ಯೆ ಕೇಸಲ್ಲಿ ಮೊಹ್ಮದ್ ಬಿನ್ ಸಲ್ಮಾನ್ ಹೆಸರು ತೆಗೆದಿದೆ. ಆದ್ರೆ ಅತ್ತ ಸೌದಿ ಅರೇಬಿಯಾ ಮಾತ್ರ ಅಮೆರಿಕದ ವರದಿಯನ್ನು ಸುಳ್ಳು ಎಂದಿದ್ದು, ಆಧಾರರಹಿತವಾಗಿದೆ ಅಂತ ಹೇಳಿದೆ.

ಜಮಾಲ್ ಖಶೋಗಿ ಸೌದಿ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್ ಅವರ ಕೆಲವೊಂದು ಕ್ರಮಗಳನ್ನು ಟೀಕಿಸುತ್ತಿದ್ದರು. ಹೀಗಾಗಿ ಮೊಹ್ಮದ್ ಬಿನ್ ಸಲ್ಮಾನ್ ಜಮಾಲ್ ಖಶೋಗಿಯ ಜೀವಂತವಾಗಿ ಸೆರೆ ಹಿಡಿಯಬೇಕು ಅಥವಾ ಹತ್ಯೆ ಮಾಡಬೇಕು ಎಂದು ಆದೇಶ ನೀಡಿದ್ದರು ಅಂತ ವರದಿಯಲ್ಲಿ ಹೇಳಲಾಗಿದೆ. ಅಂದಹಾಗೆ 2018ರ ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್​​ನಲ್ಲಿರೋ ಸೌದಿ ರಾಯಭಾರಿ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ನಡೆದಿತ್ತು. ಈ ಸಂಬಂಧ ಸೌದಿ ಐವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆದ್ರೆ ನಂತರದಲ್ಲಿ ಗಲ್ಲು ಶಿಕ್ಷೆಯನ್ನು 20 ವರ್ಷಗಳ ಜೈಲು ಶಿಕ್ಷೆಗೆ ಬದಲಿಸಲಾಗಿತ್ತು.

ಗುಪ್ತಚರ ಇಲಾಖೆ ವರದಿಯಲ್ಲಿ ಮೊಹ್ಮದ್ ಬಿನ್ ಸಲ್ಮಾನ್ ಹೆಸರು ಬಂದ ಬೆನ್ನಲ್ಲೇ ಅಮೆರಿಕ ಹಲವು ನಿರ್ಬಂಧಗಳನ್ನು ವಿಧಿಸಿದೆ. ಸೌದಿ ನಾಗರಿಕರ ವೀಸಾ ಬ್ಯಾನ್ ಮಾಡಿದೆ. ಆದ್ರೆ ಮೊಹ್ಮದ್ ಬಿನ್ ಸಲ್ಮಾನ್ ಮೇಲೆ ಯಾವುದೇ ನಿರ್ಬಂಧ ವಿಧಿಸಿಲ್ಲ.. ಯುವರಾಜ ಮಾಡಿದ ತಪ್ಪಿಗೆ ಸೌದಿ ಜನರಿಗೆ ಶಿಕ್ಷೆ ಕೊಟ್ಟಂತಾಗಿದೆ.

-masthmagaa.com

Contact Us for Advertisement

Leave a Reply