ಕೇರಳ ಚಿನ್ನ ಕಳ್ಳಸಾಗಣೆ ಆರೋಪಿಗಳಿಗೆ ‘ಡಿ-ಕಂಪನಿ’ ಜೊತೆ ಲಿಂಕ್..!

masthmagaa.com:

ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಕೇರಳ ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳು ಮೋಸ್ಟ್ ವಾಂಟೆಡ್​ ಉಗ್ರ ದಾವುದ್ ಇಬ್ರಾಹಿಂನ ‘ಡಿ-ಕಂಪನಿ’ (ದಾವುದ್​ನ ಗ್ಯಾಂಗ್​) ಜೊತೆ ಸಂಪರ್ಕ ಹೊಂದಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ (National Investigation Agency-NIA) ಅನುಮಾನ ವ್ಯಕ್ತಪಡಿಸಿದೆ. ಈ ಬಗ್ಗೆ ತನಿಖೆ ನಡೆಸಬೇಕು ಅಂತಾನೂ ಎನ್​ಐಎ ವಿಶೇಷ ಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಪ್ರಕರಣದ 7 ಆರೋಪಿಗಳು ಜಾಮೀನಿಗಾಗಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಎನ್​ಐಎ, ಆರೋಪಿಗಳು ಡಿ-ಕಂಪನಿ ಜೊತೆ ಲಿಂಕ್ ಹೊಂದಿರುವ ಸಾಧ್ಯತೆ ಇದೆ. ಹೀಗಾಗಿ ಪ್ರಕರಣದಲ್ಲಿ ಉಗ್ರ ಲಿಂಕ್ ಬಗ್ಗೆಯೂ ತನಿಖೆ ನಡೆಸುವ ಅವಶ್ಯಕತೆ ಇದೆ. ಚಿನ್ನ ಕಳ್ಳಸಾಗಣೆಯಿಂದ ಬಂದ ಹಣವನ್ನ ದೇಶ ವಿರೋಧಿ ಮತ್ತು ಉಗ್ರ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತುಅಂತ ಗುಪ್ತಚರ ಮಾಹಿತಿ ಸಿಕ್ಕಿದೆ ಅಂತ ಎನ್​ಐಎ ಕೋರ್ಟ್​ಗೆ ತಿಳಿಸಿದೆ.

ಈ ವರ್ಷದ ಜುಲೈನಲ್ಲಿ ಸುಮಾರು 30 ಕೆ.ಜಿ.ಯಷ್ಟು ಚಿನ್ನವನ್ನು ರಾಜತಾಂತ್ರಿಕ ಮಾರ್ಗದ ಮೂಲಕ ವಿದೇಶದಿಂದ ಕಳ್ಳಸಾಗಣೆ ಮಾಡಲಾಗಿತ್ತು ಅನ್ನೋ ಆರೋಪವಿದೆ. ಇಷ್ಟು ಪ್ರಮಾಣದ ಚಿನ್ನವನ್ನು ಅಂದು ಕೇರಳದ ತಿರುವನಂತಪುರಂ ಏರ್​ಪೋರ್ಟ್​ನಲ್ಲಿ ಜಪ್ತಿ ಮಾಡಲಾಗಿತ್ತು. ಅದಾದ ಬಳಿಕ ಈ ಪ್ರಕರಣ ಕೇರಳ ರಾಜಕೀಯದಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇದೀಗ ಪ್ರಕರಣದಲ್ಲಿ ದಾವುದ್​ ಇಬ್ರಾಹಿಂ ಗ್ಯಾಂಗ್​ನ ಲಿಂಕ್​ ಇರುವ ಬಗ್ಗೆ ಎನ್​ಐಎ ಅನುಮಾನ ವ್ಯಕ್ತಪಡಿಸಿರೋದ್ರಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply