masthmagaa.com:

ಕೊರೋನಾಗೆ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿದ ‘ಕೋವಾಕ್ಸಿನ್’ ಲಸಿಕೆ ಮಾನವ ಮೇಲಿನ ಪ್ರಯೋಗಕ್ಕೆ ಅನುಮತಿ ಪಡೆದ ಬೆನ್ನಲ್ಲೇ ಭಾರತ ಮೂಲದ ಮತ್ತೊಂದು ಫಾರ್ಮಾ ಕಂಪನಿ Zydus Cadila ಅಭಿವೃದ್ಧಿಪಡಿಸಿದ ಲಸಿಕೆ ಕೂಡ ಮಾನವ ಮೇಲಿನ ಪ್ರಯೋಗಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (DCGI) ಅನುಮತಿ ಪಡೆದಿದೆ.

ಅಂದ್ಹಾಗೆ ಈ ಲಸಿಕೆಯನ್ನು ಮೊದಲು ಇಲಿ, ಮೊಲ, ಗಿನಿಯಾ ಪಿಗ್ಸ್ ಮುಂತಾದ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗಿತ್ತು. ಈ ವೇಳೆ ಕೊರೋನಾ ವೈರಾಣು ವಿರುದ್ಧ ಪ್ರಾಣಿಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ರೂಪುಗೊಂಡಿದ್ದು ಗೊತ್ತಾಗಿತ್ತು.

ಪ್ರಾಣಿಗಳ ಮೇಲೆ ನಡೆಸಿದ ಲಸಿಕೆ ಪ್ರಯೋಗದ ವರದಿಯನ್ನು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಸಲ್ಲಿಸಲಾಗಿತ್ತು. ಅದನ್ನ ಪರಿಶೀಲಿಸಿದ ತಜ್ಞರ ಸಮಿತಿಯು ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು Zydus Cadila ಕಂಪನಿಗೆ ಅನುಮತಿ ನೀಡಿದೆ.

ಇದನ್ನೂ ಓದಿ: ಭಾರತ-ಚೀನಾ ಸಂಘರ್ಷ: ಲಡಾಖ್​ಗೆ ಪ್ರಧಾನಿ ಮೋದಿ ದಿಢೀರ್ ದೌಡು

ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ವೇಳೆ ಆಸ್ಪತ್ರೆಗಳಲ್ಲಿರುವ ಕೆಲವೇ ಕೆಲವು ಕೊರೋನಾ ಸೋಂಕಿತರಿಗೆ ಈ ಲಸಿಕೆ ನೀಡಲಾಗುತ್ತದೆ. ಬಳಿಕ ಈ ಲಸಿಕೆ ಪರಿಣಾಮಕಾರಿ ಎನಿಸಿದ್ರೆ ಸಾವಿರಾರು ಸೋಂಕಿತರ ಮೇಲೆ ಮೂರನೇ ಹಂತದ ಲಸಿಕೆ ಪ್ರಯೋಗ ನಡೆಸಲಾಗುತ್ತದೆ. ಈ ವೇಳೆಯೂ ಉತ್ತಮ ಫಲಿತಾಂಶ ಬಂದರೆ ಲಸಿಕೆಯು ಮಾರಾಟಕ್ಕೆ ಲಭ್ಯವಾಗಲಿದೆ.

ಇತ್ತೀಚೆಗೆ ಭಾರತ ಮೂಲದ ಭಾರತ್ ಬಯೋಟೆಕ್ ಇಂಟರ್​ನ್ಯಾಷನಲ್ ಲಿಮಿಟೆಡ್​ ಅಭಿವೃದ್ಧಿಪಡಿಸಿದ ‘ಕೋವಾಕ್ಸಿನ್’ ಲಸಿಕೆಯ ಮಾನವ ಪ್ರಯೋಗಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿತ್ತು. ಇದು ಭಾರತದ ಮೊದಲ ಸ್ವದೇಶಿ ಲಸಿಕೆ ಅಂತಾನೇ ಪರಿಗಣಿಸಲಾಗಿದೆ.

-masthmagaa.com

Contact Us for Advertisement

Leave a Reply