7ನೇ ಸುತ್ತಿನ ಮಾತುಕತೆಯಲ್ಲೂ ಪಟ್ಟು ಬಿಡದ ರೈತರು, ಸರ್ಕಾರ..!

masthmagaa.com:

ದೆಹಲಿ: ಇಂದು ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ 7ನೇ ಸುತ್ತಿನ ಮಾತುಕತೆ ನಡೆದಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ಸೋಮ್ ಪ್ರಕಾಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ರೈತ ನಾಯಕರು ಭಾಗಿಯಾಗಿದ್ರು.

ಆದ್ರೆ ಇಂದಿನ ಸಭೆಯಲ್ಲೂ ರೈತರು ಮೂರೂ ಕೃಷಿ ಕಾನೂನುಗಳನ್ನು ರದ್ದು ಮಾಡಬೇಕು ಅನ್ನೋ ಬೇಡಿಕೆ ಸರ್ಕಾರದ ಮುಂದಿಟ್ರು. ಅದೇ ರೀತಿ ಸರ್ಕಾರ ಕೂಡ ಎಂದಿನಂತೆ ಕಾನೂನಿನಲ್ಲಿ ತಿದ್ದುಪಡಿ ಮಾಡ್ತೀವಿ.. ಅದಕ್ಕೆ ಒಪ್ಪಿಕೊಳ್ಳಿ ಅಂತ ರೈತರ ಮನವೊಲಿಕೆಗೆ ಮುಂದಾಯ್ತು.. ಆದ್ರೆ ರೈತರು ಮಾತ್ರ ಕಾನೂನು ರದ್ದು ಬಿಟ್ಟು ಬೇರೇನೂ ಬೇಡ ಅಂತ ಪಟ್ಟು ಹಿಡಿದಿದ್ದಾರೆ. ಸಭೆಗೂ ಮುನ್ನ ಹೋರಾಟದಲ್ಲಿ ಮೃತಪಟ್ಟ ರೈತರಿಗೆ  2 ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯ್ತು.

ಮಧ್ಯಾಹ್ನ ಊಟದ ವೇಳೆ ಸರ್ಕಾರದ ಕಡೆಯಿಂದ ತರಿಸಲಾಗಿದ್ದ ಊಟವನ್ನು ನಿರಾಕರಿಸಿದ ರೈತರು, ನಿಮ್ಮ ಊಟ ನೀವೇ ಮಾಡಿ.. ನಾವು ನಮ್ಮ ಊಟ ಮಾಡ್ತೀವಿ ಅಂತ ತಾವೇ ತಂದಿದ್ದ ಆಹಾರ ಸೇವಿಸಿದ್ರು. ಇದೇನು ಹೊಸತಲ್ಲ.. ರೈತರು ಪ್ರತಿಯೊಂದು ಸಭೆಯಲ್ಲೂ ತಾವೇ ಊಟ ತರಿಸಿಕೊಂಡು ಮಾಡಿದ್ಧಾರೆ. ಸರ್ಕಾರ ಜಗ್ಗದೇ ಇದ್ದಲ್ಲಿ ಜನವರಿ 6ರ ನಂತರ ಹೋರಾಟವನ್ನು ತೀವ್ರಗೊಳಿಸೋದಾಗಿಯೂ ರೈತರು ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply