ಭಾರತದ ಸೇನೆಗೆ ಹೊಸಬಲ..! ಏನು ಗೊತ್ತಾ..?

masthmagaa.com:

ದೆಹಲಿ: ಭಾರತ ಸೇನೆಗೆ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್​​​ಗಳ ಶಕ್ತಿ ಸಿಗಲಿದೆ. 1,188 ಕೋಟಿ ರೂಪಾಯಿ ವೆಚ್ಚದಲ್ಲಿ, 4,960 ಕ್ಷಿಪಣಿಗಳ ಖರೀದಿಗೆ ನಿರ್ಧರಿಸಲಾಗಿದೆ. ಸ್ವದೇಶಿ ಕಂಪನಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಜೊತೆ ಒಪ್ಪಂದಕ್ಕೂ ಭಾರತದ ರಕ್ಷಣಾ ಇಲಾಖೆ ಸಹಿ ಹಾಕಿದೆ. ಈ ಮಿಸೈಲ್​​ಗಳು 1,850 ಮೀಟರ್​​ವರೆಗೆ ಸಾಗೋ ಕ್ಯಪಾಸಿಟಿ ಹೊಂದಿವೆ. ಇವುಗಳನ್ನು ಭೂಮಿಯ ಮೇಲಿಂದಲೇ ವಾಹನ ಆಧಾರಿತ ಲಾಂಚರ್​ಗಳ ಮೂಲಕ ಉಡಾವಣೆ ಮಾಡಬಹುದು. ಈ ಮೂಲಕ ಚೀನಾ ಮತ್ತು ಪಕ್ಕದ ಪಾಕಿಸ್ತಾನದ ಜೊತೆ ನಿರಂತರ ಸಂಘರ್ಷ ಹಿನ್ನೆಲೆಯಲ್ಲಿ ಭಾರತಕ್ಕೆ ಅನುಕೂಲವಾಗಲಿದೆ. ಸೇನೆಯ ಸಾಮರ್ಥ್ಯ ವೃದ್ಧಿಸಲಿದೆ.

-masthmagaa.com

 

Contact Us for Advertisement

Leave a Reply