ಪ್ರಧಾನಿ ಮೋದಿಯನ್ನ ಬಿಟ್ರೆ ತಾಜ್ ಮಹಲ್​​​​ನೂ ಮಾರಿಬಿಡ್ತಾರೆ – ರಾಹುಲ್ ಗಾಂಧಿ ವ್ಯಂಗ್ಯ

ದೆಹಲಿಯಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿ ಹೋದಲ್ಲಿ ಬಂದಲ್ಲಿ ‘ಮೇಕ್​ ಇನ್​ ಇಂಡಿಯಾ’ ಅಂತಾರೆ. ಆದರೆ ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಉತ್ತರಪ್ರದೇಶದ ಆಗ್ರದಲ್ಲಿ ಇದುವೆರೆಗೂ ಒಂದೇ ಒಂದು ಕಾರ್ಖಾನೆಯನ್ನೂ ಸ್ಥಾಪಿಸಿಲ್ಲ. ಬದಲಿಗೆ ಎಲ್ಲವನ್ನೂ ಮಾರಿ ಹಾಕ್ತಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವ ಕೇಂದ್ರ ಸರ್ಕಾರ, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಏರ್​ ಇಂಡಿಯಾ, ಹಿಂದುಸ್ಥಾನ್ ಪೆಟ್ರೋಲಿಯಂ, ರೈಲ್ವೇ, ಕೆಂಪುಕೋಟೆ ಸೇರಿದಂತೆ ಎಲ್ಲವನ್ನೂ ಮಾರಾಟ ಮಾಡೋಕೆ ಹೊರಟಿದ್ದಾರೆ. ಮುಂದೆ ಒಂದು ದಿನ ತಾಜ್​ಮಹಲ್​ ಮಾರಾಟ ಮಾಡಿದ್ರೂ ಅಚ್ಚರಿಯಿಲ್ಲ ಎಂದಿದ್ದಾರೆ. ಅಷ್ಟೆ ಅಲ್ಲ ಪ್ರಧಾನಿ ಮೋದಿ ಧರ್ಮದ ಬಗ್ಗೆ ಅರ್ಥವೇ ಮಾಡಿಕೊಂಡಿಲ್ಲ. ಭಾರತೀಯ ಜನತಾ ಪಕ್ಷದ ಕೆಲಸ ಹಿಂಸೆಯನ್ನ ಪಸರಿಸೋದು ಅಂತಲ್ಲಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Contact Us for Advertisement

Leave a Reply