ದೆಹಲಿಯಲ್ಲಿ ಮತ್ತೆ ‘ಪೊರಕೆ’ ಪೈಲ್ವಾನ್.. ಚುನಾವಣೋತ್ತರ ಸಮೀಕ್ಷೆಯಲ್ಲಿ ಕೇಜ್ರಿ ದರ್ಬಾರ್..!

ದೆಹಲಿಯಲ್ಲಿ ಮತ್ತೆ ಆಪ್ ಕೀ ಸರ್ಕಾರ್ ಬರಲಿದೆ. ಕೇಜ್ರಿವಾಲ್ ದರ್ಬಾರ್ ಮತ್ತೆ ಮುಂದುವರಿಯಲಿದೆ. ಹೀಗಂತಾ ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಭವಿಷ್ಯ ನುಡಿದಿದೆ. ದಿಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಅಂತ್ಯಗೊಂಡ ಬೆನ್ನಲ್ಲೇ, ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಂದ ಫಲಿತಾಂಶವೇ ಇಲ್ಲೂ ಪುನರಾವರ್ತನೆಗೊಂಡಿದೆ. ದೆಹಲಿ ಚುನಾವಣಾ ಪೂರ್ವ ನಡೆದಿದ್ದ ಎಲ್ಲಾ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಕ್ಷವೇ ಗೆಲ್ಲುತ್ತೆ ಎಂದು ಹೇಳಲಾಗಿತ್ತು. ಮತದಾನ ಅಂತ್ಯದ ಬಳಿಕ ಸಂಜೆ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಗಳಲಿಯೂ ಅದೇ ಫಲಿತಾಂಶ ಹೊರಬಿದ್ದಿದೆ. ಆಮ್ ಆದ್ಮಿ ಪಕ್ಷವೇ ಮತ್ತೆ ದೆಹಲಿ ಗದ್ದುಗೆ ಏರಲಿದೆ ಎಂದು ಎಕ್ಸಿಟ್ ಪೋಲ್ ಹೇಳುತ್ತಿದೆ. ಇತ್ತೀಚಿಗೆ ಜಾರ್ಖಂಡ್, ಮಹಾರಾಷ್ಟ್ರವನ್ನು ಕಳೆದುಕೊಂಡಿದ್ದ ಬಿಜೆಪಿಗೆ ಈ ಬಾರಿಯೂ ದೆಹಲಿ ಕೈತಪ್ಪುವ ಸಾಧ್ಯತೆಯನ್ನ ಸರ್ವೆಗಳು ಹೇಳ್ತಿವೆ. ಇದಕ್ಕೆಲ್ಲಾ ಫೆಬ್ರವರಿ 11ರವರೆಗೂ ಕಾಯಲೇಬೇಕು.

Contact Us for Advertisement

Leave a Reply