ಕೊರೋನಾ ಸೋಂಕಿಗೆ ಹೆದರಿ ಆಸ್ಪತ್ರೆಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ!

masthmagaa.com:

ಇಷ್ಟು ದಿನ ಕೊರೋನಾ ಕಾಯಿಲೆಯ ತಪಾಸಣೆಗೆ ಹೆದರಿ ಜನ ಆಸ್ಪತ್ರೆಯಿಂದ ಕಾಲ್ಕಿಳ್ತಿದ್ರು. ಆದ್ರೆ ದೆಹಲಿಯಲ್ಲೊಬ್ಬ ಕೊರೋನಾ ಶಂಕಿತ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾನೆ. ಆಸ್ಟ್ರೇಲಿಯಾದ ಸಿಡ್ನಿಯಿಂದ ಭಾರತಕ್ಕೆ ಬಂದಿದ್ದ ತನ್ವೀರ್​​​ ಸಿಂಗ್‌ಗೆ ಏರ್‌ಪೋರ್ಟ್‌ನಲ್ಲಿ ಸ್ಕ್ರೀನಿಂಗ್ ನಡೆಸಲಾಗಿತ್ತು. ಈ ವೇಳೆ ಕೊರೋನಾ ವೈರಸ್‌ನ ಲಕ್ಷಣ ಕಂಡು ಬಂದಿತ್ತು. ಈತ ತೀವ್ರ ತಲೆನೋವಿನಿಂದ ಬಳಲುತ್ತಿದ್ದ. ಹೀಗಾಗಿ ಈತನ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯ ಐಸೋಲೇಷನ್‌ನಲ್ಲಿ ದಾಖಲಿಸಿ ನಿಗಾ ಇರಿಸಲಾಗಿತ್ತು. ಇನ್ನೂ ಕೊರೋನಾ ಪರೀಕ್ಷೆಯ ರಿಪೋರ್ಟ್ ಕೂಡ ಬಂದಿರಲಿಲ್ಲ. ಅಷ್ಟರಲ್ಲಿ ಡೆಡ್ಲಿ ಸೋಂಕಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಸ್ಪತ್ರೆಯ 7ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ.

-masthmagaa.com

Contact Us for Advertisement

Leave a Reply