ತಬ್ಲಿಘಿ ಜಮಾತ್​ನ ಮುಖ್ಯಸ್ಥನಿಗೆ ಕ್ರೈಂ ಬ್ರಾಂಚ್ ನೋಟಿಸ್​​..! ಅದ್ರಲ್ಲೇನಿದೆ ಗೊತ್ತಾ..?

masthmagaa.com:

ದೆಹಲಿ: ನಿಜಾಮುದ್ದೀನ್​ನಲ್ಲಿರೋ ತಬ್ಲಿಘಿ ಜಮಾತ್​​​​​ನ ಮುಖ್ಯಸ್ಥ ಮೌಲಾನಾ ಸಾದ್​​​ಗೆ ಕ್ರೈಂ ಬ್ರಾಂಚ್ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ 26 ಪ್ರಶ್ನೆಗಳನ್ನು ಕೇಳಿದ್ದು, ಉತ್ತರ ನೀಡುವಂತೆ ತಿಳಿಸಿದ್ದಾರೆ. ಅಲ್ಲದೆ ನಾಪತ್ತೆಯಾಗಿರುವ ಮೌಲಾನಾ ಸಾದ್​​​​ಗೆ ಹುಡುಕಾಟ ಕೂಡ ತೀವ್ರಗೊಂಡಿದೆ. ನಿನ್ನೆ ಆಡಿಯೋ ಬಿಡುಗಡೆ ಮಾಡಿದ್ದ ಮೌಲಾನಾ ಸಾದ್​ ತಾನು ಐಸೋಲೇಷನ್​​ನಲ್ಲಿದ್ದೇನೆ ಎಂದು ಹೇಳಿದ್ದರು.

ನೋಟಿಸ್​​ನಲ್ಲಿ ಕೇಳಿರುವ ಪ್ರಶ್ನೆಗಳೇನು..? 

ದೆಹಲಿ ಕ್ರೈಂ ಬ್ರಾಂಚ್ ಕಳುಹಿಸಿರುವ ನೋಟಿಸ್​​ನಲ್ಲಿ ಸಂಘಟನೆ, ರಿಜಿಸ್ಟ್ರೇಷನ್, ಸಂಘಟನೆಯ ಸದಸ್ಯರು ಮತ್ತು ನೌಕರರ ಕುರಿತ ಮಾಹಿತಿ, ಅವರ ಮನೆಯ ವಿಳಾಸ ಮತ್ತು ಮೊಬೈಲ್ ನಂಬರ್​, ಮಸೀದಿಯ ಆಡಳಿತ ಮಂಡಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವಂತೆ ಕೇಳಲಾಗಿದೆ. ಜೊತೆಗೆ ಈ ಮರ್ಕಜ್​​​​​​ನ 3 ವರ್ಷದ ಆದಾಯ ತೆರಿಗೆಯ ಮಾಹಿತಿ, ಪ್ಯಾನ್​ಕಾರ್ಡ್​ ನಂಬರ್, ಬ್ಯಾಂಕ್ ಅಕೌಂಟ್​ನ ಮಾಹಿತಿ, ಬ್ಯಾಂಕ್ ಖಾತೆಯ ಒಂದು ವರ್ಷದ ಸ್ಟೇಟ್​​ಮೆಂಟ್​ನ್ನು ಕೂಡ ಕೇಳಿದೆ. ಜನವರಿ 1ರಿಂದ ಮಸೀದಿಯಲ್ಲಿ ನಡೆದ ಕಾರ್ಯಕ್ರಮಗಳು, ಮಸೀದಿಯಲ್ಲಿರುವ ಸಿಸಿಟಿವಿಗಳ ಮಾಹಿತಿಯನ್ನೂ ನೀಡುವಂತೆ ನೋಟಿಸ್​​ನಲ್ಲಿ ಕೇಳಲಾಗಿದೆ. ಜೊತೆಗೆ ಮಾರ್ಚ್​ ತಿಂಗಳಲ್ಲಿ ಮಸೀದಿಗೆ ಬಂದ ಭಾರತೀಯರು ಮತ್ತು ವಿದೇಶಿಗರ ಬಗ್ಗೆಯೂ ಮಾಹಿತಿ ಕೇಳಲಾಗಿದೆ.

-masthmagaa.com

Contact Us for Advertisement

Leave a Reply