ಲಾಕ್​ಡೌನ್ ವೇಳೆ ಭಾರತದಲ್ಲಿ ಹೆಚ್ಚಿದ ಕೌಟುಂಬಿಕ ಹಿಂಸಾಚಾರ..!

masthmagaa.com:

ದೆಹಲಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಭಾರತದಲ್ಲಿ ಮಾರ್ಚ್​​ 24ರಿಂದ 21 ದಿನಗಳ ಲಾಕ್​ಡೌನ್ ಘೋಷಣೆಯಾಗಿದೆ. ಶಾಕಿಂಗ್ ವಿಚಾರ ಅಂದ್ರೆ ಲಾಕ್​ಡೌನ್ ಬಳಿಕ ದೇಶದಲ್ಲಿ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳು ಜಾಸ್ತಿಯಾಗಿವೆ. ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗ್ತಿದೆ. ದೆಹಲಿಯಲ್ಲಿ ಈವರೆಗೆ ಪ್ರತಿದಿನ ಕೌಟುಂಬಿಕ ಹಿಂಸೆಗೆ ಸಂಬಂಧಿಸಿದಂತೆ 900-1,000 ಕರೆಗಳು ಬರುತ್ತಿದ್ದವು. ಆದ್ರೆ ಈಗ 1,000-1,200 ಕರೆಗಳು ಬರುತ್ತಿವೆ. ಅಲ್ಲದೆ ಅಕ್ಕಪಕ್ಕದ ಮನೆಯವರ ನಡುವೆಯೂ ಜಗಳಗಳು ಹೆಚ್ಚಾಗುತ್ತಿದ್ದು, ಪೊಲೀಸರಿಗೆ ಕರೆಗಳು ಜಾಸ್ತಿಯಾಗಿವೆ.

ಈ ಬಗ್ಗೆ ಮಾತನಾಡಿದ ದೆಹಲಿಯ ಮಹಿಳೆಯೊಬ್ಬರು, ನನ್ನ ಪತಿ ಪಾನ್ ಅಂಗಡಿ ನಡೆಸುತ್ತಾರೆ. ಮೊದಲಿನಿಂದಲೂ ನನಗೆ ಆಗಾಗ ಹಿಂಸೆ ನೀಡುತ್ತಿದ್ದರು. ಆದ್ರೆ ಈಗ ಲಾಕ್​​ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಇರೋದ್ರಿಂದ ಪ್ರತಿದಿನವೂ ಹೊಡೆದು, ಹಿಂಸೆ ನೀಡುತ್ತಿದ್ದಾರೆ ಅಂತ ಅಳಲು ತೋಡಿಕೊಂಡಿದ್ದಾರೆ.

ಇನ್ನು ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಮಾರ್ಚ್​ 23ರಿಂದ 30ರವರೆಗೆ 58 ದೂರುಗಳು ಸಲ್ಲಿಕೆಯಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಮಹಿಳೆಯರಿಗೆ ಹಿಂಸೆ ನೀಡುತ್ತಿರುವ ಪ್ರಕರಣಗಳು ಜಾಸ್ತಿಯಾಗಿವೆ. ಮನೆಯಲ್ಲಿ ಪುರುಷರು ಮಹಿಳೆಯರ ಮೇಲೆ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ. ಅದ್ರಲ್ಲೂ ದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಈ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ ಅಂತ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply