masthmagaa.com:

ಇಂಗ್ಲೆಂಡ್ ಕ್ರಿಕೆಟ್​ ತಂಡ ಬರೋಬ್ಬರಿ 16 ವರ್ಷಗಳ ಬಳಿಕ ಪಾಕ್ ಪ್ರವಾಸ ಕೈಗೊಳ್ಳಲಿದೆ. ಎರಡು ದೇಶಗಳ ನಡುವೆ 2021ರ ಅಕ್ಟೋಬರ್​ನಲ್ಲಿ 2 ಪಂದ್ಯಗಳ ಟಿ-20 ಸರಣಿ ನಡೆಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್​ ಬೋರ್ಡ್​ (ECB) ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ನಿರ್ಧರಿಸಿವೆ. 2021ರ ಅಕ್ಟೋಬರ್ 14 ಮತ್ತು 15ರಂದು ಕರಾಚಿಯಲ್ಲಿ ಪಂದ್ಯಗಳು ನಡೆಯಲಿವೆ. ಅಂದ್ಹಾಗೆ 2005ರಲ್ಲಿ ಇಂಗ್ಲೆಂಡ್ ತಂಡ ಕೊನೆಯ ಬಾರಿ ಪಾಕ್ ಪ್ರವಾಸ ಕೈಗೊಂಡಿತ್ತು. ಭಾರತದಲ್ಲಿ 2021ರ ಅಕ್ಟೋಬರ್-ನವೆಂಬರ್​ನಲ್ಲಿ 7ನೇ ಆವೃತ್ತಿಯ ಐಸಿಸಿ ಟಿ-20 ವಿಶ್ವಕಪ್ ನಡೆಯಲಿದೆ. ಇದಕ್ಕೂ ಮೊದಲು ಪಾಕ್​ನಲ್ಲಿ ಎರಡು ಟಿ-20 ಪಂದ್ಯಗಳನ್ನ ಆಡಲಿರುವ ಇಂಗ್ಲೆಂಡ್ ತಂಡ ಅಲ್ಲಿಂದ ಭಾರತಕ್ಕೆ ಬರಲಿದೆ.

-masthmagaa.com

Contact Us for Advertisement

Leave a Reply