‘ಇಡೀ ಜಮ್ಮು-ಕಾಶ್ಮೀರ ಜೈಲಿನಂತಾಗಿದೆ’: ಮೆಹಬೂಬಾ ಮುಫ್ತಿ

masthmagaa.com:

ಇತ್ತೀಚೆಗೆ ಜಮ್ಮು-ಕಾಶ್ಮೀರದ ಧ್ವಜ ಸಿಗುವವರೆಗೆ ತ್ರಿವರ್ಣ ಧ್ವಜವನ್ನ ಕೂಡ ಹಾರಿಸಲ್ಲ ಅಂತ ಹೇಳಿದ್ದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಇದೀಗ ‘ಜಮ್ಮು-ಕಾಶ್ಮೀರ ಜೈಲಿನಂತಾಗಿದೆ’ ಅಂತ ಹೇಳಿದ್ದಾರೆ. ಅಂದ್ಹಾಗೆ ಜಮ್ಮು-ಕಾಶ್ಮೀರದಲ್ಲಿ ಯಾರು ಬೇಕಾದ್ರೂ ಭೂಮಿಯನ್ನು ಖರೀದಿಸಬಹುದು ಅನ್ನೋ ಕಾನೂನು ಹಾಗೂ 6 ಎನ್​ಜಿಒಗಳ ಮೇಲೆ ಎನ್​ಐಎ ನಡೆಸಿದ ದಾಳಿಯನ್ನ ಖಂಡಿಸಿ ಶ್ರೀನಗರದಲ್ಲಿ ಪಿಡಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅವರೆಲ್ಲರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಕ್ಕೆ ಮೆಹಬೂಬಾ ಮುಫ್ತಿ ಈ ರೀತಿ ಹೇಳಿದ್ದಾರೆ.

‘ಜಮ್ಮು-ಕಾಶ್ಮೀರದ ನೆಲವನ್ನು ಲೂಟಿ ಹೊಡೆಯಲು ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕಾನೂನಿನ ವಿರುದ್ಧ ನಮ್ಮ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದ್ರೆ ಅವರನ್ನ ಅರೆಸ್ಟ್ ಮಾಡಲಾಗಿದೆ. ಅವರನ್ನ ಭೇಟಿಯಾಗಲೂ ಕೂಡ ಬಿಡುತ್ತಿಲ್ಲ. ಇಲ್ಲಿ ನಾಗರಿಕ ಸಮಾಜ ಸೇರಿದಂತೆ ರಾಜಕಾರಣಿಗಳು ಕೂಡ ಮಾತನಾಡುವಂತಿಲ್ಲ ಎಂಬಂತಾಗಿದೆ. ಇಡೀ ಜಮ್ಮು-ಕಾಶ್ಮೀರ ಜೈಲಿನಂತಾಗಿದೆ’ ಅಂತ ಮೆಹಬೂಬೂ ಮುಫ್ತಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply