ಕಾಲೇಜುಗಳಿಗೆ 50 ದಿನ ರಜೆ ಅನ್ನೋದು ನಿಜಾನಾ..? ಸುಳ್ಳಾ..?

masthmagaa.com:

ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವುದನ್ನ ತಡೆಗಟ್ಟಲು ಕಾಲೇಜುಗಳಿಗೆ ಘೋಷಿಸಲಾಗಿರುವ ರಜೆಯನ್ನ ಮೇ 20ರವರೆಗೆ ಮುಂದುವರಿಸಲಾಗಿದೆ ಎಂಬ ಸುತ್ತೋಲೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೆ ಇಂತಹ ಯಾವುದೇ ಸುತ್ತೋಲೆಯನ್ನ ಇಲಾಖೆಯಿಂದ ಹೊರಡಿಸಿಲ್ಲ ಅಂತ ಕಾಲೇಜು ಶಿಕ್ಷಣ ಆಯುಕ್ತರ ಕಚೇರಿ ಸ್ಪಷ್ಟಪಡಿಸಿದೆ. ಜೊತೆಗೆ ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಸಿದೆ.

ಏಪ್ರಿಲ್ 1ರಿಂದ ಮೇ 20ರವರೆಗೆ ಒಟ್ಟು 50 ದಿನಗಳ ರಜೆ ಘೋಷಣೆ ಮಾಡಲಾಗಿದೆ ಅಂತ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರ ಸುಳ್ಳು ಸಹಿಯೊಂದಿಗೆ ಸುಳ್ಳು ಸುತ್ತೋಲೆಯೊಂದು ಹರಿದಾಡುತ್ತಿದೆ.

ಕೊರೋನಾ ವೈರಸ್ ಭೀತಿ ಹಿನ್ನೆಲೆ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್​ಡೌನ್ ಹೇರಲಾಗಿದೆ. ಹೀಗಾಗಿ ಅಲ್ಲಿಯವರೆಗೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಅಂತ ಕಾಲೇಜು ಶಿಕ್ಷಣ ಆಯುಕ್ತರ ಕಚೇರಿ ತಿಳಿಸಿದೆ.

-masthmagaa.com

 

 

 

Contact Us for Advertisement

Leave a Reply