ಪಬ್​​ಜಿ ಬದಲಿಗೆ ಬರುತ್ತಿದೆ ದೇಶೀಯ ಗೇಮ್​ ಫೌಜಿ..!

masthmagaa.com:

ದೆಹಲಿ: ದೇಶದಲ್ಲಿ ಚೀನಾ ಮೂಲದ ಅ್ಯಪ್ ಮತ್ತು ಗೇಮ್ ನಿಷೇಧದ ಜತೆಗೇ ರದ್ದುಗೊಂಡಿದ್ದ ಜನಪ್ರಿಯ ‘ಪಬ್‌ಜಿ ಗೇಮ್’ ಬದಲಿಗೆ ಇದೀಗ ದೇಶೀಯ ಗೇಮ್ ‘ಫೌಜಿ’ ಬಿಡುಗಡೆಗೆ ಸಜ್ಜಾಗುತ್ತಿದೆ. ಗಣರಾಜ್ಯೋತ್ಸವದಂದು ಹೊಸ ದೇಶೀಯ ಗೇಮ್ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಬಳಕೆದಾರರ ವೈಯಕ್ತಿಕ ಮಾಹಿತಿ ಕದಿಯುತ್ತದೆ ಮತ್ತು ದೇಶದ ಸಾರ್ವಭೌಮತೆ, ಭದ್ರತೆಗೆ ಧಕ್ಕೆ ತರುತ್ತದೆ ಎನ್ನುವ ಕಾರಣಕ್ಕಾಗಿ ಚೀನಾ ಮೂಲದ 200ಕ್ಕೂ ಅಧಿಕ ಆ್ಯಪ್‌ಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಅದರ ಜತೆಗೇ ಚೀನಾ ಮೂಲದ ಟೆನ್ಸೆಂಟ್ ಸಂಸ್ಥೆಯ ಸರ್ವರ್ ನಿರ್ವಹಣೆ ಹೊಂದಿದ್ದ ಜನಪ್ರಿಯ ‘ಪಬ್‌ಜಿ’ ಗೇಮ್ ಕೂಡ ದೇಶದಲ್ಲಿ ನಿಷೇಧವಾಗಿದೆ. ಈ ಮಧ್ಯೆ ‘ಪಬ್‌ಜಿ’ ಬದಲಾಗಿ, ಬೆಂಗಳೂರು ಮೂಲದ ಎನ್‌ಕೋರ್ ಸಂಸ್ಥೆ ಅಭಿವೃದ್ಧಿಪಡಿಸಿರುವ FAU-G ವಿಡಿಯೋ ಗೇಮ್ ಗಣರಾಜ್ಯೋತ್ಸವದ ಅವಧಿಯಲ್ಲಿ ಬಿಡುಗಡೆಯಾಗುತ್ತಿದೆ.

-masthmagaa.com

Contact Us for Advertisement

Leave a Reply