ಕೊರೋನಾ ವೈರಸ್​ಗೆ ಚೀನಾ ಔಷಧ ನಿಜಾನಾ..? ಸುಳ್ಳಾ..?

masthmagaa.com:

ಕೊರೋನಾ ವೈರಸ್​ಗೆ ಔಷಧ ಕಂಡುಹಿಡಿಯಲು ವಿಶ್ವದ ವಿವಿಧ ರಾಷ್ಟ್ರಗಳು ಪ್ರಯತ್ನ ನಡೆಸುತ್ತಿವೆ. ಇದರ ನಡುವೆಯೇ  ಚೀನಾ ವಿಜ್ಞಾನಿಗಳು ‘ಫವಿಪಿರಾವಿರ್’ ಎಂಬ ಲಸಿಕೆಯನ್ನ ಕೊರೋನಾ ಸೋಂಕಿತರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ. ಇದನ್ನ ಚೀನಾದ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ ಡೆವಲಪ್​ಮೆಂಟ್​​​ನ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಮೊದಲಿಗೆ ದಕ್ಷಿಣ ಚೀನಾದ ಶೆನ್​ಝೆನ್​ ನಗರದ 80 ರೋಗಿಗಳ ಮೇಲೆ ಈ ಔಷಧಯನ್ನ ಪ್ರಯೋಗಿಸಲಾಯ್ತು. ಈ ಔಷಧಿಯ ಬಳಕೆಯಿಂದ ಚೇತರಿಕೆಯ ಅವಧಿಯು 11 ದಿನಗಳಿಂದ 4 ದಿನಗಳಿಗೆ ಇಳಿದಿದೆ ಅಂತ ಪ್ರಾಯೋಗಿಕ ಪರೀಕ್ಷೆಯಲ್ಲಿ ಗೊತ್ತಾಗಿದೆ. ವುಹಾನ್​ನಲ್ಲಿ ನಡೆದ ಮತ್ತೊಂದು ಪ್ರಯೋಗದಲ್ಲಿ ಜ್ವರ ನಿಯಂತ್ರಣ ಅವಧಿ 4.2 ದಿನಗಳಿಂದ 2.5 ದನಗಳಿಗೆ ಇಳಿದಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

2014ರಿಂದ ಜಪಾನ್ ಮಾರ್ಕೆಟ್​ನಲ್ಲಿ ಲಭ್ಯವಿರೋ ‘ಫವಿಪಿರಾವಿರ್’ ಲಸಿಕೆಯಿಂದ ಯಾವುದೇ ಸೈಡ್​ ಎಫೆಕ್ಟ್​ ಇಲ್ಲ ಅನ್ನೋದು ಕೂಡ ಕಂಡುಬಂದಿದೆ. ಆದ್ರೆ ಇದರ ಬಗ್ಗೆ ಮತ್ತಷ್ಟು ವೈದ್ಯಕೀಯ ಅವಲೋಕನ ನಡೆಯಬೇಕಾಗಿರುವುದರಿಂದ ಇದನ್ನ ಈಗಲೇ ಬಳಸಬಹುದೇ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

ಇನ್ನು ವಾರಗಳ ಹಿಂದಷ್ಟೇ ಸಾಕಷ್ಟು ಭರವಸೆ ಮೂಡಿಸಿದ್ದ ‘ರೆಮ್ಡೆಸಿವಿರ್’ ಎಂಬ ಮತ್ತೊಂದು ಲಸಿಕೆ ಕೆಲವು ಅಡ್ಡಪರಿಣಾಮ ಹೊಂದಿರುವುದು ಪತ್ತೆಯಾಗಿದೆ. ಹೀಗಾಗಿ ಈ ಲಸಿಕೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ.

ಜೊತೆಗೆ ಚೀನಾದಲ್ಲಿ ಕೊರೋನಾ ನಿಯಂತ್ರಣಕ್ಕೆ ತರಲು ಟ್ರೆಡಿಷನಲ್ ಚೈನೀಸ್ ಮೆಡಿಸಿನ್ (ಟಿಸಿಎಂ) ಅಥವಾ ಸಾಂಪ್ರದಾಯಿಕ ಚೀನೀ ಔಷಧಿಯನ್ನ ವ್ಯಾಪಕವಾಗಿ ಬಳಸಲಾಯ್ತು. ಇದು ಕೊರೋನಾ ರೋಗದ ಎಲ್ಲಾ ಹಂತಗಳಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply