masthmagaa.com:

ಪ್ರಧಾನಿ ನರೇಂದ್ರ ಮೋದಿ ಇವತ್ತು ‘ಮನ್​ ಕಿ ಬಾತ್​’ ಮಾಸಿಕ ಬಾನುಲಿ ಕಾರ್ಯಕ್ರಮದಲ್ಲಿ ದೇಶವನ್ನ ಉದ್ದೇಶಿಸಿ ಮಾತನಾಡಿದ್ರು. ಇದು 72ನೇ ಆವೃತ್ತಿಯ ಮತ್ತು ಈ ವರ್ಷದ ಕೊನೇ ಮನ್​ ಕಿ ಬಾತ್ ಕಾರ್ಯಕ್ರಮ ಆಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ‘ಕೊರೋನಾದಿಂದಾಗಿ ಜಗತ್ತಿನಾದ್ಯಂತ ಪೂರೈಕೆ ಸರಪಳಿಯಲ್ಲಿ ಅಡ್ಡಿ ಉಂಟಾಯ್ತು. ಆದ್ರೆ ಪ್ರತಿ ಬಿಕ್ಕಟ್ಟಿನಿಂದಲೂ ನಾವು ಹೊಸ ಹೊಸ ಪಾಠಗಳನ್ನ ಕಲಿತೆವು. ನಮ್ಮ ದೇಶ ಹೊಸ ಸಾಮರ್ಥ್ಯವನ್ನ ಅಭಿವೃದ್ಧಿಪಡಿಸಿತು. ಇದನ್ನ ನಾವು ‘ಆತ್ಮನಿರ್ಭರ್ ಭಾರತ್’ ಅಥವಾ ಸ್ವಾವಲಂಬಿ ಭಾರತ ಅಂತ ಕರೀಬಹುದು. ಗ್ರಾಹಕರು ಈಗ ‘ಮೇಡ್​ ಇನ್ ಇಂಡಿಯಾ’ ಆಟಿಕೆಗಳನ್ನ ಕೇಳ್ತಿದ್ದಾರೆ. ಇದು ನಮ್ಮ ಯೋಚನಾ ಪ್ರಕ್ರಿಯೆಯಲ್ಲಾದ ದೊಡ್ಡ ಬದಲಾವಣೆಯನ್ನ ತೋರಿಸುತ್ತೆ. ಅದು ಕೂಡ ಒಂದು ವರ್ಷದ ಅವಧಿಯಲ್ಲಿ ಅನ್ನೋದು ಗಮನಾರ್ಹ. ಈ ರೂಪಾಂತರವನ್ನ ಅಳೆಯುವುದು ಸುಲಭವಲ್ಲ. ನಿಮಗೆ ನನ್ನ ಮನವಿ ಏನಂದ್ರೆ, ನೀವು ದಿನನಿತ್ಯ ಬಳಸುವ ವಸ್ತುಗಳನ್ನ ಪಟ್ಟಿ ಮಾಡಿ. ಇದರಲ್ಲಿ ವಿದೇಶದಿಂದ ಆಮದು ಮಾಡಿಕೊಂಡ ಯಾವ ವಸ್ತು ನಮ್ಮ ಜೀವನದ ಭಾಗವಾಗಿದೆ ಅನ್ನೋದನ್ನ ಚೆಕ್ ಮಾಡಿ. ಅಂತಹ ವಸ್ತುಗಳಿಗೆ ಭಾರತದ ಪರ್ಯಾಯ ವಸ್ತುಗಳನ್ನ ಕಂಡುಕೊಳ್ಳೋಣ. ಭಾರತೀಯರು ಕಷ್ಟಪಟ್ಟು ತಯಾರಿಸಿದ ವಸ್ತುಗಳನ್ನ ಬಳಸಲು ನಿರ್ಧರಿಸೋಣ. ದೇಶದ ಜನ ಇಂತಹ ದೃಢ ಹೆಜ್ಜೆ ಇಟ್ಟಾಗ ಮತ್ತು ‘ವೋಕಲ್ ಫಾರ್ ಲೋಕಲ್​’ ಮಂತ್ರವನ್ನ ಪಠಿಸಿದಾಗ ನಮ್ಮ ಉತ್ಪನ್ನಗಳು ಕೂಡ ವಿಶ್ವದರ್ಜೆಯದ್ದಾಗಿರಬೇಕು. ಇದನ್ನ ಭಾರತೀಯ ಕಂಪನಿಗಳು ಮತ್ತು ಉದ್ಯಮಿಗಳ ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಉದ್ಯಮಿಗಳು ಮತ್ತು ಸ್ಟಾರ್ಟಪ್​ಗಳು ಮುಂದೆ ಬರಬೇಕು. ನಾವು ಕಸ ಹಾಕೋದಿಲ್ಲ ಅಂತ ಪ್ರತಿಜ್ಞೆ ಮಾಡಬೇಕು. ಇದು ಸ್ವಚ್ಛ ಭಾರತ ಅಭಿಯಾದ ಮೊದಲ ಹೆಜ್ಜೆಯಾಗಿದೆ. ಜೊತೆಗೆ ಏಕ ಬಳಕೆಯ ಪ್ಲಾಸ್ಟಿಕ್​ಗೆ ಅಂತ್ಯ ಹಾಡಬೇಕು’ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply