ಚಿಕಿತ್ಸೆಯೇ ಇಲ್ಲದೆ ಗುಣವಾಯ್ತು ಏಡ್ಸ್​​..! ವೈದ್ಯಲೋಕವೇ ದಂಗು

masthmagaa.com:

ಅಮೆರಿಕ: ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಏಡ್ಸ್​ ಪೀಡಿತರಿಬ್ಬರು ಚಿಕಿತ್ಸೆಯೇ ಇಲ್ಲದೆ ಗುಣಮುಖರಾಗಿದ್ಧಾರೆ. ಇವರ ದೇಹದಲ್ಲಿದ್ದ ರೋಗ ನಿರೋಧಕ ಶಕ್ತಿಯೇ ಮಾರಕ ಹೆಚ್​​ಐವಿಯನ್ನು ಮಟ್ಟಹಾಕಿದೆ. ಇದನ್ನು ಕಂಡ ವಿಶ್ವದ ವಿಜ್ಞಾನಿಗಳು ಮತ್ತು ವೈದ್ಯರೇ ದಂಗಾಗಿ ಹೋಗಿದ್ಧಾರೆ. ಯಾಕಂದ್ರೆ ಹೆಚ್​​ಐವಿ ಸೋಂಕು ಒಮ್ಮೆ ವಕ್ಕರಿಸಿಕೊಂಡ್ರೆ ಜೀವನದ ಉದ್ದಕ್ಕೂ ಔಷಧ ಸೇವಿಸುತ್ತಲೇ ಇರಬೇಕು. ಈ ಹಿಂದೆ ಎರಡು ಬಾರಿ ಹೆಚ್​​ಐವಿ ಪೀಡಿತರಿಗೆ ಬೋನ್​​ ಮ್ಯಾರೋ ಟ್ರಾನ್ಸ್​​ಪ್ಲಾಂಟ್​​ ಮಾಡಲಾಗಿತ್ತು. ಈ ಚಿಕಿತ್ಸೆ ಪಡೆದ ರೋಗಿಗಳಲ್ಲಿ ವೇಗವಾಗಿ ಹೆಚ್​ಐವಿ ಕಡಿಮೆಯಾಗಿತ್ತು. ಅಲ್ಲದೆ ನಂತರ ಅವರಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಆದ್ರೆ ಹೆಚ್​​ಐವಿ ಪೀಡಿತರ ದೇಹದ ರೋಗ ನಿರೋಧಕ ಶಕ್ತಿಯೇ ಸೋಂಕನ್ನು ಮಟ್ಟ ಹಾಕಿರೋದು ಇದೇ ಮೊದಲು. ಆದ್ರೆ ಹೆಚ್​​ಐವಿ ವಿಚಾರದಲ್ಲಿ ಸೋಂಕು ಪೀಡಿತರ ಹೆಸರು ಪ್ರಕಟಿಸೋದಿಲ್ಲ.. ಹೀಗಾಗಿ ವೈದ್ಯರು ಮತ್ತು ವಿಜ್ಞಾನಿಗಳು ಈ ರೋಗಿಗೆ EC1 ಮತ್ತು EC2 ಎಂದು ಹೆಸರಿಟ್ಟಿದ್ಧಾರೆ.

-masthmagaa.com

Contact Us for Advertisement

Leave a Reply