masthmagaa.com:

ಕೊರೋನಾಗೆ ಅಮೆರಿಕದಲ್ಲಿ ಅಭಿವೃದ್ಧಿಪಡಿಸುತ್ತಿರುವ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯ ಮೊದಲ ಡೋಸ್ ಡಿಸೆಂಬರ್ ಕೊನೆಯಲ್ಲಿ ಅಥವಾ ಜನವರಿ ಆರಂಭದಲ್ಲಿ ಸಿಗುವ ಸಾಧ್ಯತೆ ಇದೆ ಅಂತ ವೈಟ್​ ಹೌಸ್​ನ ಉನ್ನತ ವೈದ್ಯ ಡಾ. ಅಂಥೋನಿ ಫೌಚಿ ಹೇಳಿದ್ದಾರೆ. ಮೊದಲಿಗೆ ಹೈ-ರಿಸ್ಕ್​ ಅಮೆರಿಕನ್ನರಿಗೆ ಲಸಿಕೆ ಹಾಕಲಾಗುವುದು ಅಂತಾನೂ ಅವರು ಹೇಳಿದ್ದಾರೆ. ಅಂದ್ರೆ ವಯಸ್ಸಾದವರು, ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅಮೆರಿಕದಲ್ಲಿ ಮೊದಲು ಲಸಿಕೆ ಹಾಕಲಾಗುತ್ತದೆ.

Contact Us for Advertisement

Leave a Reply