masthmagaa.com:

ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಪದೇಪದೇ ತಗಾದೆ ತೆಗೆಯುತ್ತಿರುವ ನಡುವೆಯೇ ಭಾರತಕ್ಕೆ ಫ್ರಾನ್ಸ್​ನಿಂದ ಭರಪೂರ ಬೆಂಬಲ ವ್ಯಕ್ತವಾಗಿದೆ. ಎಷ್ಟರಮಟ್ಟಿಗೆ ಅಂದ್ರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಲು ಫ್ರಾನ್ಸ್​ ಒತ್ತಾಯಿಸಿದೆ. ರಫೇಲ್ ಫೈಟರ್ ಜೆಟ್​ಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಫ್ರಾನ್ಸ್ ಸಶಸ್ತ್ರ ಪಡೆಗಳ ಸಚಿವೆ ಫ್ಲಾರೆನ್ಸ್ ಪಾರ್ಲಿ, ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವಕ್ಕೆ ಫ್ರಾನ್ಸ್ ಬೆಂಬಲಿಸುತ್ತೆ’ ಎಂದಿದ್ದಾರೆ.

ಅಂದ್ಹಾಗೆ ಚೀನಾ, ಫ್ರಾನ್ಸ್‌, ರಷ್ಯಾ‌, ಇಂಗ್ಲೆಂಡ್‌ ಮತ್ತು ಅಮೆರಿಕ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾಗಿವೆ. 10 ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳಿವೆ. ಈ ರಾಷ್ಟ್ರಗಳ ಸದಸ್ಯತ್ವ 2 ವರ್ಷಗಳವರೆಗೆ ಇರುತ್ತದೆ. ಇತ್ತೀಚೆಗೆ ಭಾರತ ಕೂಡ ಕಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ. ಭಾರತದ ಸದಸ್ಯತ್ವ ಜನವರಿ 1, 2021ರಿಂದ ಆರಂಭವಾಗಲಿದೆ. ಆದ್ರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ಆಗಲು ಭಾರತ ಸಾಕಷ್ಟು ಪ್ರಯತ್ನಿಸುತ್ತಿದೆ. ಇದಕ್ಕೆ ಚೀನಾ ಅಡ್ಡಗಾಲು ಹಾಕುತ್ತಿದೆ.

ಯಾವುದೇ ಒಂದು ರಾಷ್ಟ್ರ ಭದ್ರತಾ ಮಂಡಳಿಯ ಕಾಯಂ ಸದಸ್ಯರಾಗಲು ಈಗಾಗಲೇ ಕಾಯಂ ಸದಸ್ಯರಾಗಿರುವ ಐದೂ ದೇಶಗಳು ಒಪ್ಪಬೇಕು. ಒಂದು ದೇಶ ಒಪ್ಪದಿದ್ದರೂ ಭಾರತಕ್ಕೆ ಕಾಯಂ ಸದಸ್ಯತ್ವ ಸಿಗೋದಿಲ್ಲ. ಇದನ್ನೇ ಬಳಸಿಕೊಂಡು ಡ್ರ್ಯಾಗನ್ ರಾಷ್ಟ್ರ ಚೀನಾ ಪದೇಪದೆ ಭಾರತದ ಸದಸ್ಯತ್ವಕ್ಕೆ ಅಡ್ಡಗಾಲು ಹಾಕ್ತಾನೇ ಬರ್ತಿದೆ.

-masthmagaa.com

Contact Us for Advertisement

Leave a Reply