ವರ್ಷಾಂತ್ಯಕ್ಕೆ ಲಸಿಕೆ ಲಭ್ಯವೆಂದ ಟ್ರಂಪ್.. ಸಾಧ್ಯವೇ ಇಲ್ಲವೆಂದ ಜರ್ಮನಿ..!

masthmagaa.com:

ಕೊರೋನಾ ವೈರಸ್​ಗೆ ಲಸಿಕೆ ಕಂಡುಹಿಡಿಯಲು ಎಲ್ಲಾ ರಾಷ್ಟ್ರಗಳು ನಾನಾ ಕಸರತ್ತು ನಡೆಸುತ್ತಿವೆ. ಒಂದ್ವೇಳೆ ಲಸಿಕೆ ಕಂಡುಹಿಡಿದರೂ ಸಾರ್ವಜನಿಕ ಬಳಕೆಗೆ ಅದು ಯಾವಾಗ ಲಭ್ಯವಾಗುತ್ತೆ ಅನ್ನೋದಕ್ಕೆ ಇನ್ನು ಸ್ಪಷ್ಟ ಉತ್ತರವಿಲ್ಲ. ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಈ ವರ್ಷಾಂತ್ಯದಲ್ಲಿ ಲಸಿಕೆ ಸಿಗುವ ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಮೆರಿಕದಲ್ಲಿ ಕೊರೋನಾಗೆ 1 ಲಕ್ಷ ಮಂದಿ ಬಲಿಯಾಗಬಹುದು ಅನ್ನೋ ಆತಂಕ ವ್ಯಕ್ತಪಡಿಸಿದ್ದಾರೆ.

ಆದ್ರೆ ಕೊರೋನಾ ವೈರಸ್​ಗೆ ಲಸಿಕೆ ಅಭಿವೃದ್ಧಿಪಡಿಸಲು ‘ವರ್ಷಗಳೇ’ ಬೇಕಾಗಬಹುದು ಅಂತ ಜರ್ಮನಿ ಹೇಳಿದೆ. ಈ ಬಗ್ಗೆ ಮಾತನಾಡಿರೋ ಜರ್ಮನಿಯ ಆರೋಗ್ಯ ಸಚಿವ ಜೆನ್ಸ್ ಸ್ಪಾನ್,  ಒಂದ್ವೇಳೆ ಈ ವರ್ಷಾಂತ್ಯದಲ್ಲಿ ಲಸಿಕೆ ಕಂಡುಹಿಡಿದರೆ ಅದಕ್ಕಿಂತ ಸಂತೋಷದ ವಿಚಾರ ಮತ್ತೊಂದಿಲ್ಲ. ಆದ್ರೆ ಲಸಿಕೆ ಅಭಿವೃದ್ಧಿಪಡಿಸೋದು ಸವಾಲಿನ ಹಾಗೂ ತುಂಬಾ ಕಷ್ಟದ ಕೆಲಸ. ಹೀಗಾಗಿ ಲಸಿಕೆ ಕಂಡುಹಿಡಿಯಲು ವರ್ಷಗಳೇ ಬೇಕಾಗಬಹುದು ಎಂದಿದ್ದಾರೆ.

ಕೊರೋನಾ ಮಾಹಾಮಾರಿಗೆ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಹಾಗೂ ಜರ್ಮನಿ ಕೂಡ ಇವೆ. ಜಗತ್ತಿನಾದ್ಯಂತ 35 ಲಕ್ಷ ಜನರಿಗೆ ಹರಡಿರುವ ಸೋಂಕು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರನ್ನ ಬಲಿ ಪಡೆದಿದೆ. ಅಮೆರಿಕದಲ್ಲಿ ಕಾಯಿಲೆ ಹಾವಳಿ ಹೆಚ್ಚಾಗಿದ್ದು 11 ಲಕ್ಷ ಜನರಿಗೆ ಸೋಂಕು ತಗುಲಿದ್ದು, 60 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply