masthmagaa.com:

ಕಳೆದ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಾಣು ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿದೆ. ಇಡೀ ಪ್ರಪಂಚದಲ್ಲಿ ಇದುವರೆಗೆ ಬರೋಬ್ಬರಿ 4.77 ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. 92 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಾಗಿದೆ.

ಅಮೆರಿಕದಲ್ಲಿ ಕೊರೋನಾ ಆರ್ಭಟ ಜೋರಾಗಿದ್ದು 23 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿದೆ. 1.21 ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಜಾಗತಿಕ ಸೋಂಕಿತರ ಪಟ್ಟಿಯಲ್ಲಿ ಬ್ರೆಜಿಲ್ ಎರಡನೇ, ರಷ್ಯಾ ಮೂರನೇ ಮತ್ತು ಭಾರತ ನಾಲ್ಕನೇ ಸ್ಥಾನದಲ್ಲಿದೆ. ಈ ನಾಲ್ಕು ದೇಶಗಳಲ್ಲಿ ಕೊರೋನಾ ಹಾವಳಿ ತುಂಬಾ ಹೆಚ್ಚಾಗಿದೆ.

ಕಳೆದ ನಾಲ್ಕೈದು ದಿನಗಳ ಟ್ರೆಂಡ್ ನೋಡಿದ್ರೆ ಅಮೆರಿಕ ಮತ್ತು ಬ್ರೆಜಿಲ್​ನಲ್ಲಿ ಪ್ರತಿದಿನ ಸುಮಾರು 30 ಸಾವಿರ ಪ್ರಕರಣ, ಭಾರತದಲ್ಲಿ 14 ಸಾವಿರ ಪ್ರಕರಣ ಮತ್ತು ರಷ್ಯಾದಲ್ಲಿ 7 ಸಾವಿರ ಪ್ರಕರಣಗಳು ದೃಢಪಡುತ್ತಿವೆ.

ಉಳಿದಂತೆ ಪೆರು, ಚಿಲಿ, ಮೆಕ್ಸಿಕೊ, ಪಾಕಿಸ್ತಾನ, ಸೌದಿ ಅರೇಬಿಯಾ, ಇರಾನ್, ಬಾಂಗ್ಲಾದೇಶ, ಕತಾರ್, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಂಡೋನೇಷ್ಯಾ, ಕೊಲಂಬಿಯಾ ಮುಂತಾದ ದೇಶಗಳಲ್ಲೂ ಸೋಂಕು ವೇಗ ಪಡೆದುಕೊಂಡಿದೆ.

ಟಾಪ್-15 ಕೊರೋನಾ ಪೀಡಿತ ರಾಷ್ಟ್ರಗಳು:

1. ಅಮೆರಿಕ: 23.47 ಲಕ್ಷ ಸೋಂಕಿತರು (1,21,000 ಸಾವು)

2. ಬ್ರೆಜಿಲ್: 11.45 ಲಕ್ಷ (52,000 ಸಾವು)

3. ರಷ್ಯಾ: 5.98 ಲಕ್ಷ (8,300 ಸಾವು)

4. ಭಾರತ: 4.56 ಲಕ್ಷ (14,476 ಸಾವು)

5. ಬ್ರಿಟನ್: 3.07 ಲಕ್ಷ (43,000 ಸಾವು)

6. ಪೆರು: 2.60 ಲಕ್ಷ (8,400 ಸಾವು)

7. ಚಿಲಿ: 2.50 ಲಕ್ಷ (4,500 ಸಾವು)

8. ಸ್ಪೇನ್: 2.46 ಲಕ್ಷ (28,000 ಸಾವು)

9. ಇಟಲಿ: 2.38 ಲಕ್ಷ (34,000 ಸಾವು)

10. ಇರಾನ್: 2.09 ಲಕ್ಷ (9,800 ಸಾವು)

11. ಫ್ರಾನ್ಸ್: 1.97 ಲಕ್ಷ (29,000 ಸಾವು)

12. ಜರ್ಮನಿ: 1.92 ಲಕ್ಷ (8,900 ಸಾವು)

13. ಮೆಕ್ಸಿಕೊ: 1.91 ಲಕ್ಷ (23,000 ಸಾವು)

14. ಟರ್ಕಿ: 1.90 ಲಕ್ಷ (5,000 ಸಾವು)

15. ಪಾಕಿಸ್ತಾನ: 1.88 ಲಕ್ಷ (3,700 ಸಾವು)

-masthmagaa.com

Contact Us for Advertisement

Leave a Reply