masthmagaa.com:

ಕೊರೋನಾ ಹಾವಳಿಯಿಂದ ವಿದೇಶ ಮತ್ತು ಭಾರತದಲ್ಲಿ ಸಿಲುಕಿರುವವರಿಗೆ ಕೇಂದ್ರ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ಭಾರತದಲ್ಲಿ ಸಿಲುಕಿರುವವರು ವಿದೇಶಕ್ಕೆ ಹೋಗಲು ಮತ್ತು ವಿದೇಶದಲ್ಲಿ ಸಿಲುಕಿರುವವರು ಭಾರತಕ್ಕೆ ಬರಲು ಇದ್ದ ಅವಕಾಶವನ್ನು ಮತ್ತಷ್ಟು ವರ್ಗಗಳಿಗೆ ವಿಸ್ತರಿಸಲಾಗಿದೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆ ಪ್ರಕಟಣೆ ಹೊರಡಿಸಿದೆ.

ಇದರ ಪ್ರಕಾರ Persons of Indian Origin-PIO ಕಾರ್ಡ್​ (ಭಾರತೀಯ ಮೂಲದ ವ್ಯಕ್ತಿಗಳು), Overseas Citizenship of India-OCI ಕಾರ್ಡ್​ (ಸಾಗರೋತ್ತರ ಪೌರತ್ವ ಹೊಂದಿರುವ ಭಾರತೀಯರು) ಹೊಂದಿರುವವರು ಮತ್ತು ಎಲ್ಲಾ ವಿದೇಶಿಗರು ವಾಯು ಮಾರ್ಗ ಅಥವಾ ಜಲ ಮಾರ್ಗದ ಮೂಲಕ ಭಾರತಕ್ಕೆ ಬರಬಹುದಾಗಿದೆ ಮತ್ತು ಭಾರತದಿಂದ ವಿದೇಶಕ್ಕೆ ಹೋಗಬಹುದಾಗಿದೆ. ಆದ್ರೆ ಟೂರಿಸ್ಟ್​ ವೀಸಾ ಹೊಂದಿರುವವರೆಗೆ ಈ ಅವಕಾಶವಿಲ್ಲ.

ಈ ವರ್ಗದ ಜನರು ವಂದೇ ಭಾರತ್ ಮಿಷನ್, ಏರ್​ ಬಬಲ್ ವ್ಯವಸ್ಥೆ ಅಥವಾ ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿಸಿರುವ ನಾನ್​-ಶೆಡ್ಯೂಲ್ಡ್​ ಕಮರ್ಷಿಲ್ ಫ್ಲೈಟ್​ಗಳಲ್ಲಿ ಪ್ರಯಾಣಿಸಬಹುದು. ಆದ್ರೆ ಹೀಗೆ ಬರುವ ಮತ್ತು ಹೋಗುವ ಪ್ರಯಾಣಿಕರು ಕೇಂದ್ರ ಸರ್ಕಾರ ಮತ್ತು ಆರೋಗ್ಯ ಇಲಾಖೆ ಜಾರಿ ಮಾಡಿರುವ ಕೊರೋನಾ ನಿಯಮಗಳನ್ನು ಪಾಲಿಸಲೇಬೇಕು ಅಂತ ಸೂಚಿಸಲಾಗಿದೆ.

ಈ ಮೂಲಕ ಟೂರಿಸ್ಟ್ ವೀಸಾ, ಮೆಡಿಕಲ್ ವೀಸಾ, ಎಲೆಕ್ಟ್ರಾನಿಕ್ ವೀಸಾವನ್ನು ಹೊರತುಪಡಿಸಿ ಉಳಿದೆಲ್ಲಾ ವೀಸಾಗಳನ್ನು ತಕ್ಷಣದಿಂದಲೇ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಒಂದ್ವೇಳೆ  ವೀಸಾಗಳ ಅವಧಿ ಮುಗಿದಿದ್ದರೆ ಹೊಸ ವೀಸಾ ಪಡೆಯಲು ಅವಕಾಶವಿರುತ್ತದೆ. ವೈದ್ಯಕೀಯ ಉದ್ದೇಶದಿಂದ ವಿದೇಶದಲ್ಲಿರುವವರು ಭಾರತಕ್ಕೆ ಬರಬೇಕು ಅಂದ್ರೆ ಮೆಡಿಕಲ್ ವೀಸಾಗೆ ಅಪ್ಲೈ ಮಾಡಬಹುದು ಅಂತ ಕೇಂದ್ರ ಸರ್ಕಾರ ತಿಳಿಸಿದೆ.

-masthmagaa.com

Contact Us for Advertisement

Leave a Reply