ಕೊರೋನಾ ಸ್ವಾತಂತ್ರ್ಯ ನಂತರದ ದೊಡ್ಡ ತುರ್ತುಪರಿಸ್ಥಿತಿ..! ರಘುರಾಮ್ ರಾಜನ್

masthmagaa.com:

ಕೊರೋನಾ ವೈರಸ್​​ನಿಂದಾಗಿ ದೇಶದಲ್ಲಿ ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿಗೆ ಅತಿದೊಡ್ಡ ತುರ್ತುಪರಿಸ್ಥಿತಿ ಎದುರಾಗಿದೆ ಅಂತ ಆರ್​ಬಿಐ ಮಾಜಿ ಗವರ್ನರ್​​ ರಘುರಾಮ್ ರಾಜನ್​ ಹೇಳಿದ್ದಾರೆ. 2008-09ರಲ್ಲಿ ಸಂಭವಿಸಿದ್ದ ವಿಶ್ವ ಆರ್ಥಿಕ ಹಿಂಜರಿತಕ್ಕಿಂತ ಇದು ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕಲಿದೆ. ಸರ್ಕಾರ ಬಡವರಿಗಾಗಿ ಹೆಚ್ಚು ಖರ್ಚು ಮಾಡಬೇಕು ಮತ್ತು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು ಅಂತ ಹೇಳಿದ್ದಾರೆ. ಜೊತೆಗೆ ಈ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರ ವಿಪಕ್ಷ ನಾಯಕರು ಮತ್ತು ಆರ್ಥಿಕ ತಜ್ಞರ ಸಹಾಯ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಚಿಕಾಗೋದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್​ನಲ್ಲಿ ಫೈನಾನ್ಸ್​ನ ಪ್ರೊಫೆಸರ್ ಆಗಿರುವ ರಘುರಾಮ್ ರಾಜನ್​​, ಎಲ್ಲವನ್ನೂ ಪ್ರಧಾನಮಂತ್ರಿ ಕಚೇರಿಯಿಂದಲೇ ನಿಯಂತ್ರಣ ಮಾಡೋದ್ರಿಂದ ಹೆಚ್ಚಿನ ಲಾಭ ಆಗೋದಿಲ್ಲ. ಯಾಕಂದ್ರೆ ಈಗಾಗಲೇ ನೌಕರರ ಮೇಲೆ ಕೆಲಸದ ಒತ್ತಡ ಇದೆ. ಇಂಥಾ ಸಮಯದಲ್ಲಿ ಸರ್ಕಾರ ಅನುಭವ ಮತ್ತು ಸಾಮರ್ಥ್ಯ ಇರುವವರನ್ನು ಬಳಸಿಕೊಳ್ಳಬೇಕು ಅಂತ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply