masthmagaa.com:

ಭಾರತದಲ್ಲಿ ಭಾರತ್ ಬಯೋಟೆಕ್​ನ ‘ಕೋವಾಕ್ಸಿನ್​’ ಲಸಿಕೆ ಮತ್ತು ಆಸ್ಟ್ರಾಝೆನೆಕಾ-ಆಕ್ಸ್​ಫರ್ಡ್ ಯುನಿವರ್ಸಿಟಿಯ ‘ಕೋವಿಶೀಲ್ಡ್​’ ಲಸಿಕೆಯ 3ನೇ ಹಂತದ ಮಾನವ ಪ್ರಯೋಗ ನಡೆಯುತ್ತಿದೆ. ದೇಶದಲ್ಲಿ ಕೊನೇ ಹಂತದ ಮಾನವ ಪ್ರಯೋಗ ನಡೆಯುತ್ತಿರುವ ಲಸಿಕೆಗಳು ಇವೆರಡು ಮಾತ್ರ. ಹರಿಯಾಣದಲ್ಲಿ ಭಾರತ್​ ಬಯೋಟೆಕ್ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗ ನವೆಂಬರ್ 20ರಿಂದ ಆರಂಭವಾಗಲಿದೆ. ವಿಶೇಷ ಅಂದ್ರೆ ಅಲ್ಲಿನ ಆರೋಗ್ಯ ಸಚಿವರೇ ಮೊದಲು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಲಸಿಕೆಯ ಸುರಕ್ಷತೆ ಬಗ್ಗೆ ಹಲವರಿಗೆ ಅನುಮಾನವಿದೆ. ಲಸಿಕೆ ಹಾಕಿಸಿಕೊಂಡ ಬಳಿಕ ಏನಾದ್ರೂ ಅಡ್ಡ ಪರಿಣಾಮ ಆಗುತ್ತಾ ಅನ್ನೋ ಭಯವಿದೆ. ಜನರಲ್ಲಿರುವ ಈ ಅನುಮಾನ, ಭಯವನ್ನ ಹೋಗಲಾಡಿಸಲು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರೇ ‘ಕೋವಾಕ್ಸಿನ್​’ ಲಸಿಕೆಯನ್ನ ಮೊದಲು ಹಾಕಿಸಿಕೊಳ್ಳಲು ನಿರ್ಧರಿಸಿದ್ದಾರೆ.

-masthmagaa.com

Contact Us for Advertisement

Leave a Reply