ಕೊರೋನಾ ಬಂದಿದೆ ಎಂದು ನಾಪತ್ತೆಯಾದ ಗಂಡ ಲವರ್ ಜೊತೆ ಸಿಕ್ಕಿಬಿದ್ದ..!

masthmagaa.com:

ಮುಂಬೈ: ನನಗೆ ಕೊರೋನಾ ಬಂದಿದೆ ಅಂತ ಪತ್ನಿ ಬಳಿ ಹೇಳಿ ನಾಪತ್ತೆಯಾಗಿದ್ದ 28 ವರ್ಷದ ವ್ಯಕ್ತಿಯೊಬ್ಬ ಪ್ರಿಯತಮೆ ಜೊತೆ ಪತ್ತೆಯಾಗಿದ್ದಾನೆ. ನವಿ ಮುಂಬೈನ 28 ವರ್ಷದ ವ್ಯಕ್ತಿಯೊಬ್ಬ ಜುಲೈ 24ರಂದು ತನ್ನ ಪತ್ನಿಗೆ ಕರೆ ಮಾಡಿ, ನನ್ನ ಕೊರೋನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ನಾನಿನ್ನು ಬದುಕಿರೋದಿಲ್ಲ ಅಂತ ಹೇಳಿದ್ದಾನೆ. ಪತ್ನಿ ಮಾತನಾಡುವ ಮೊದಲೇ ಕರೆ ಕಟ್ ಮಾಡಿದ್ಧಾನೆ. ನಂತರ ಪತ್ನಿ ತನ್ನ ಸಹೋದರನಿಗೆ ಕರೆ ಮಾಡಿ ಸಹಾಯ ಯಾಚಿಸಿದ್ದಾರೆ. ಪತ್ನಿಯ ಸಹೋದರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ರು.

ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ವಾಶಿ ಬಳಿ ವ್ಯಕ್ತಿಯ ಬೈಕ್, ಹೆಲ್ಮೆಟ್, ಬ್ಯಾಗ್ ಎಲ್ಲವೂ ಪತ್ತೆಯಾಗಿತ್ತು. ಆದ್ರೆ ಪೊಲೀಸರಿಗೆ ನಾಪತ್ತೆಯಾದ ವ್ಯಕ್ತಿ ಬಗ್ಗೆ ಏನೂ ಮಾಹಿತಿ ಸಿಗಲಿಲ್ಲ. ನಂತರದಲ್ಲಿ ಪೊಲೀಸರು ಆತನ ಮೊಬೈಲ್​​ ಲೊಕೇಷನ್ ಟ್ರೇಸ್ ಮಾಡಿದ್ದಾರೆ. ಆಗ ನಾಪತ್ತೆಯಾದ ವ್ಯಕ್ತಿ ನಾಪತ್ತೆಗೂ ಮುನ್ನ 2 ಬಾರಿ 100 ನಂಬರ್​​​​ಗೆ ಕರೆ ಮಾಡಿದ್ದು ಗೊತ್ತಾಗಿದೆ. ಇದ್ರಿಂದ ಪೊಲೀಸರಿಗೆ ಇದೊಂದು ದರೋಡೆಯ ಪ್ರಕರಣ ಅಂತ ಅನ್ನಿಸಿದೆ.

ಆದ್ರೆ ತನಿಖೆ ಮುಂದುವರಿದಂತೆ ನಾಪತ್ತೆಯಾದ ವ್ಯಕ್ತಿಗೆ ಅಕ್ರಮ ಸಂಬಂಧವೊಂದು ಇದ್ದಿದ್ದು ಬೆಳಕಿಗೆ ಬಂದಿದ್ದು, ಅದರ ಆಧಾರದ ಮೇಲೆ ಹುಡುಕಾಟ ನಡೆಸಿದಾಗ ವ್ಯಕ್ತಿ ಇಂದೋರ್​​ನಲ್ಲಿ ತನ್ನ ಪ್ರಿಯತಮೆ ಜೊತೆ ಪತ್ತೆಯಾಗಿದ್ದಾನೆ. ಸದ್ಯ ಪೊಲೀಸರು ಸೆಪ್ಟೆಂಬರ್ 15ರಂದು ಆತನನ್ನು ಮುಂಬೈಗೆ ಕರೆದುಕೊಂಡು ಬಂದಿದ್ದಾರೆ.

-masthmagaa.com

Contact Us for Advertisement

Leave a Reply