24 ವರ್ಷ ಬಳಿಕ ರಾಜ್ಯಸಭೆಗೆ ದೇವೇಗೌಡ.. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ

masthmagaa.com:

ಮಾಜಿ ಪ್ರಧಾನಿ ಮತ್ತು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಹೆಚ್​.ಡಿ. ದೇವೇಗೌಡರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಸಭಾ ಸಭಾಧ್ಯಕ್ಷರು ಮತ್ತು ಉಪರಾಷ್ಟ್ರಪತಿಯೂ ಆಗಿರುವ ಎಂ. ವೆಂಕಯ್ಯ ನಾಯ್ಡು ಅವರಿಗೆ ಪ್ರಮಾಣವಚನ ಬೋಧಿಸಿದ್ರು. ದೇವೇಗೌಡರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು.

87 ವರ್ಷದ ದೇವೇಗೌಡರು ಜೂನ್​ನಲ್ಲಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. 1996ರ ನಂತರ ಸಂಸತ್​ ಮೇಲ್ಮನೆ ಸದಸ್ಯರಾಗಿ ಹೆಚ್​ಡಿಡಿ ಆಯ್ಕೆಯಾಗಿರೋದು ಇದೇ ಮೊದಲು. ಈ ಬಗ್ಗೆ ಮಾತನಾಡಿದ ರಾಜ್ಯಸಭೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು, ‘ನಮ್ಮ ಸದನಕ್ಕೆ ಉತ್ತಮ ವ್ಯಕ್ತಿಯ ಸೇರ್ಪಡೆಯಾಗಿದೆ. ಮಾಜಿ ಪ್ರಧಾನಿ ಹಾಗೂ ದೇಶದ ಹಿರಿಯ ರಾಜಕೀಯ ನಾಯಕರಲ್ಲಿ ಒಬ್ಬರಾಗಿರುವ ಹೆಚ್.ಡಿ. ದೇವೇಗೌಡರು ಈಗ ನಮ್ಮ ಸದನಕ್ಕೆ ಬಂದಿದ್ದಾರೆ’ ಅಂತ ಹೇಳಿದ್ರು.

ಬಳಿಕ ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ಬಗ್ಗೆ ಮಾತನಾಡಿದ ದೇವೇಗೌಡ್ರು, ‘ಕೊರೋನಾ ಸಂದರ್ಭದಲ್ಲಿ ಈ ಮಸೂದೆಗಳನ್ನು ಪಾಸ್ ಮಾಡಲು ಯಾಕೆ ತರಾತುರಿ ಅಂತ ಪ್ರಧಾನಿ ಮೋದಿ ಹೇಳಬೇಕು. ಈ ಮಸೂದೆಗಳಿಂದ ರೈತರಿಗೆ ಏನು ಉಪಯೋಗ ಮತ್ತು ರೈತರ ಆದಾಯವನ್ನು ಹೇಗೆ ದ್ವಿಗುಣ ಗೊಳಿಸುತ್ತದೆ ಅನ್ನೋದನ್ನು ವಿವರಿಸಬೇಕು’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply