masthmagaa.com:

ಕೊರೋನಾ ವೈರಸ್ ಭೀತಿಯ ನಡುವೆ ಅಂತಿಮ ವರ್ಷದ ಪದವಿ ಪೂರ್ವ ಮತ್ತು ಸ್ನಾತಕೋತ್ತರ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳು ನಡೆಯಬೇಕಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಕಾಲೇಜುಗಳಿಗೆ ಸೂಚಿಸಲಾಗಿದೆ.

– ಪರೀಕ್ಷಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮತ್ತು ಪೋಷಕರ ನಡುವೆ ಕನಿಷ್ಠ 6 ಅಡಿ ದೈಹಿಕ ಅಂತರ ಕಾಪಾಡಬೇಕು.

– ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

– ಸಾಬೂನಿನಂದ ಆಗಾಗ ಕೈ ತೊಳೆಯಲು ಮತ್ತು ಹ್ಯಾಂಡ್​ ಸ್ಯಾನಿಟೈಸರ್​ನಿಂದ ಕೈಯನ್ನು ಸ್ವಚ್ಛಗೊಳಿಸಲು ವ್ಯವಸ್ಥೆ ಇರಬೇಕು.

– ಸೀನುವಾಗ ಮತ್ತು ಕೆಮ್ಮುವಾಗ ಕೈ ಅಥವಾ ಕರವಸ್ತ್ರವನ್ನು ಅಡ್ಡ ಹಿಡಿಯಬೇಕು.

– ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅನಾರೋಗ್ಯ ಕಾಣಿಸಿಕೊಂಡರೆ ತಕ್ಷಣ ಮಾಹಿತಿ ನೀಡಬೇಕು.

– ಉಗುಳುವುದನ್ನ ಸಂಪೂರ್ಣವಾಗಿ ನಿಷೇಧಿಸಬೇಕು.

– ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆಗೆ ಉತ್ತೇಜನ ನೀಡಬೇಕು.

– ಕಂಟೈನ್​ಮೆಂಟ್​ ಝೋನ್​ಗಳಲ್ಲಿ ಪರೀಕ್ಷಾ ಕೇಂದ್ರಗಳು ಇರುವಂತಿಲ್ಲ. ಕಂಟೈನ್​ಮೆಂಟ್​ ಝೋನ್​ಗಳಲ್ಲಿರುವ ಪರೀಕ್ಷಾರ್ಥಿಗಳು ಮತ್ತು ಸಿಬ್ಬಂದಿಗೆ ಅವಕಾಶವಿಲ್ಲ. ಕಂಟೈನ್​ಮೆಂಟ್​ ಝೋನ್​ಗಳಲ್ಲಿರುವ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ನಡೆಸಲು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು.

– ದೈಹಿಕ ಅಂತರ ಕಾಪಾಡಬೇಕಾಗಿರೋದ್ರಿಂದ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಜಾಗದ ವ್ಯವಸ್ಥೆ ಇರಬೇಕು.

– ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ಕ್, ಸೋಪ್, ಹ್ಯಾಂಡ್​ ಸ್ಯಾನಿಟೈಸರ್, ಗ್ಲೌಸ್ ಮುಂತಾದ ವಸ್ತುಗಳ ವ್ಯವಸ್ಥೆ ಇರಬೇಕು.

– ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವಾಗ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಸ್ವಯಂ ಘೋಷಿತ ಪತ್ರವನ್ನು ನೀಡಬಹುದು. ವಿದ್ಯಾರ್ಥಿಗಳಿಗೆ ಅಡ್ಮಿಟ್ ಕಾರ್ಡ್​ಗಳನ್ನ ನೀಡುವಾಗಲೂ ಇಂತಹ ಪತ್ರವನ್ನು ಪರಿಗಣಿಸಬಹುದು.

– ಪರೀಕ್ಷಾ ಕೇಂದ್ರಗಳಿಗೆ ಏನನ್ನು ತರಬೇಕು ಅನ್ನೋದನ್ನು ಮೊದಲೇ ವಿದ್ಯಾರ್ಥಿಗಳಿಗೆ ತಿಳಿಸಿರಬೇಕು. ಉದಾಹರಣೆಗೆ ಅಡ್ಮಿಟ್ ಕಾರ್ಡ್, ಐಡಿ ಕಾರ್ಡ್, ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್.

– ಪರೀಕ್ಷೆಗಳನ್ನು ನಡೆಸುವಾಗ ಕೊರೋನಾ ನಿಯಮಗಳನ್ನ ಪಾಲಿಸಬೇಕಾಗಿರೋದ್ರಿಂದ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕು.

– ವಿದ್ಯಾರ್ಥಿಗಳು ಏನನ್ನ ಮಾಡಬೇಕು, ಏನನ್ನ ಮಾಡಬಾರದು ಅನ್ನೋದನ್ನ ಇನ್ವಿಜಿಲೇಟರ್ಸ್ ಮತ್ತು ಸೂಪರ್​ವೈಸರ್​ಗಳು ತಿಳಿಸಿಕೊಡಬೇಕು.

– ಥರ್ಮಲ್ ಸ್ಕ್ರೀನಿಂಗ್ ಅಥವಾ ಪರೀಕ್ಷೆ ಬರೆಯುವ ವೇಳೆ ಸೋಂಕಿನ ಲಕ್ಷಣ ಕಂಡುಬಂದರೆ ಅಂಥವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಆರೋಗ್ಯ ತಪಾಸಣೆ ಮಾಡಿಸಬೇಕು. ಸೋಂಕಿನ ಲಕ್ಷಣ ಇರುವವರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕೋ, ಬೇಡವೋ ಎಂಬ ಬಗ್ಗೆ ಪರೀಕ್ಷೆ ಆಯೋಜಿಸುವ ಪ್ರಾಧಿಕಾರ ಅಥವಾ ಅಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕು.

– ಪರೀಕ್ಷಾ ಕೇಂದ್ರದ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕು. ಈ ವೇಳೆ ವಿದ್ಯಾರ್ಥಿಗಳು ಸ್ವಯಂ ಘೋಷಿಸಿಕೊಂಡಂತೆ ಆರೋಗ್ಯ ಪರಿಸ್ಥಿತಿ ಇಲ್ಲದಿದ್ದರೆ ಅಂಥವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೇ ಇರಬಹುದು.

– ರೋಗದ ಲಕ್ಷಣ ಇಲ್ಲದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಮಾತ್ರ ಅವಕಾಶ.

– ರೋಗ ಲಕ್ಷಣ ಇರುವವರನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು. ಅಂಥವರಿಗೆ ಬೇರೆ ವ್ಯವಸ್ಥೆ ಮೂಲಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಅಥವಾ ಅವರಿಗೆ ಬೇರೆ ದಿನ ಪರೀಕ್ಷೆ ನಡೆಸಬೇಕು. ಹೀಗಿದ್ದರೂ ರೋಗದ ಲಕ್ಷಣ ಇರುವವರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕೋ, ಬೇಡವೋ ಎಂಬ ಬಗ್ಗೆ ಪರೀಕ್ಷೆ ಆಯೋಜಿಸುವ ಪ್ರಾಧಿಕಾರ ನಿರ್ಧರಿಸುತ್ತದೆ.

– ಯಾರಿಗಾದರೂ  ಕೊರೋನಾ ಪಾಸಿಟಿವ್ ಬಂದರೆ ಅಂಥವರು ಕೂತಿದ್ದ ಸ್ಥಳವನ್ನು ಸ್ವಚ್ಛಗೊಳಿಸಬೇಕು.

– ಸರತಿ ಸಾಲಿನಲ್ಲಿ ನಿಲ್ಲಲು ಕನಿಷ್ಠ 6 ಅಡಿ ಅಂತರದಲ್ಲಿ ಮಾರ್ಕ್ ಮಾಡಬೇಕು.

– ಪರೀಕ್ಷಾ ಕೇಂದ್ರಗಳ ಒಳಗೆ ಬ್ಯಾಗ್, ಬುಕ್ಸ್, ಮೊಬೈಲ್​ ಫೋನ್​ಗಳನ್ನು ತರುವಂತಿಲ್ಲ.

– ಪರೀಕ್ಷೆ ಮುಗಿದ ನಂತರ ಹೊರ ಹೋಗುವಾಗಲೂ ದೈಹಿಕ ಅಂತರ ಕಾಪಾಡಬೇಕು.

– ವಯಸ್ಸಾದ ಸಿಬ್ಬಂದಿ, ಗರ್ಭಿಣಿ ಮತ್ತು ಬೇರೆ ಬೇರೆ ಕಾಯಿಲೆ ಇರುವಂತಹ ಸಿಬ್ಬಂದಿಯನ್ನು ಇನ್ವಿಜಿಲೇಟರ್ ಆಗಿ ನಿಯೋಜಿಸಬಾರದು. ಇಂತಹ ಸಿಬ್ಬಂದಿಯನ್ನು ವಿದ್ಯಾರ್ಥಿಗಳ ನೇರ ಸಂಪರ್ಕಕ್ಕೆ ಬರದಂತಹ ಕೆಲಸಗಳಿಗೆ ನಿಯೋಜಿಸಬಹುದು.

– ಶೈಕ್ಷಣಿಕ ಕೇಂದ್ರಗಳು ಆನ್​ಲೈನ್ ಫಾರ್ಮ್​, OR ಕೋಡ್, ಡಿಜಿಟಲ್ ಸಿಗ್ನೇಚರ್​ಗಳಂತಹ ಕ್ರಮಗಳನ್ನ ಅಳವಡಿಸಿಕೊಳ್ಳಬಹುದು.

– ಪ್ರಶ್ನೆ ಪತ್ರಿಕೆ ಅಥವಾ ಇತರೆ ಯಾವುದೇ ವಸ್ತುವನ್ನು ಪರೀಕ್ಷಾರ್ಥಿಗಳಿಗೆ ಹಂಚುವ ಮೊದಲು ಇನ್ವಿಜಿಲೇಟರ್ಸ್​ ತಮ್ಮ ಕೈಗಳನ್ನು ಸ್ಯಾನಿಟೈಸರ್​ನಿಂದ ಸ್ವಚ್ಛಗೊಳಿಸಬೇಕು. ಇದೇ ರೀತಿ ವಿದ್ಯಾರ್ಥಿಗಳು ಕೂಡ ಪ್ರಶ್ನೆ ಪತ್ರಿಕೆ ಪಡೆಯುವ ಮುನ್ನ ಮತ್ತು ಉತ್ತರ ಪತ್ರಿಕೆಯನ್ನು ಕೊಡುವ ಮುನ್ನ ಕೈಯನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.

– ಪ್ರಶ್ನೆ ಪತ್ರಿಕೆ ಅಥವಾ ಇತರೆ ಶೀಟ್​ಗಳನ್ನು ಲೆಕ್ಕ ಹಾಕುವಾಗ ಮತ್ತು ಹಂಚುವಾಗ ಎಂಜಲನ್ನು ತಾಗಿಸಬಾರದು.

– ಪರೀಕ್ಷಾರ್ಥಿಗಳು ತಮ್ಮ ವೈಯಕ್ತಿಕ ವಸ್ತುಗಳನ್ನ ಪರಸ್ಪರ ಹಂಚಿಕೊಳ್ಳುವಂತಿಲ್ಲ.

– ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಆನ್​ಲೈನ್ ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾದ್ರೆ ಕಂಪ್ಯೂಂಟರ್​ಗಳನ್ನ ಕೂಡ ಸ್ವಚ್ಛಗೊಳಿಸಬೇಕು.

– ಎಲ್ಲಾ ಸಿಬ್ಬಂದಿ ಮತ್ತು ಪರೀಕ್ಷಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿಡಬೇಕು. ಭವಿಷ್ಯದಲ್ಲಿ ಅವುಗಳು ಉಪಯೋಗಕ್ಕೆ ಬರಬಹುದು.

– ಬಳಕೆ ಮಾಡಿದ ಮಾಸ್ಕ್, ಗ್ಲೌಸ್​ಗಳನ್ನು ಸಂಬಂಧಪಟ್ಟ ಸ್ಥಳಗಳಲ್ಲಿ ಇಟ್ಟಿರುವ ಕಸದ ಬುಟ್ಟಿಯಲ್ಲೇ ಎಸೆಯಬೇಕು.

-masthmagaa.com

Contact Us for Advertisement

Leave a Reply