masthmagaa.com:

ರಷ್ಯಾದ ‘ಸ್ಪುಟ್ನಿಕ್-V’ ಲಸಿಕೆ ಉತ್ಪಾದನೆಗೆ ಸಂಬಂಧಿಸಿದಂತೆ ರಷ್ಯನ್ ಡೈರೆಕ್ಟ್ ಇನ್ವೆಸ್ಟ್​ಮೆಂಟ್​ ಫಂಡ್ (RDIF) ಮತ್ತು ಹೈದರಾಬಾದ್​ ಮೂಲದ ಹೆಟೆರೋ ಡ್ರಗ್ಸ್​ ಕಂಪನಿ ಒಪ್ಪಂದ ಮಾಡಿಕೊಂಡಿವೆ. ಇದರ ಪ್ರಕಾರ ಒಂದು ವರ್ಷದಲ್ಲಿ ಹೆಟೆರೋ ಕಂಪನಿಯು ಭಾರತದಲ್ಲಿ ‘ಸ್ಪುಟ್ನಿಕ್-V’ ಲಸಿಕೆಯ 10 ಕೋಟಿ ಡೋಸ್​ಗಳನ್ನ ಉತ್ಪಾದನೆ ಮಾಡಬಹುದು. 2021ರ ಆರಂಭದಲ್ಲಿ ಈ ಲಸಿಕೆಯ ಉತ್ಪಾದನೆ ಶುರುವಾಗಲಿದೆ ಅಂತ RDIF ಹೇಳಿದೆ.

ಹೆಟೆರೋ ಕಂಪನಿ ಉತ್ಪಾದನೆ ಮಾಡುವ ‘ಸ್ಪುಟ್ನಿಕ್​-V’ ಲಸಿಕೆಯ ಮಾನವ ಪ್ರಯೋಗ ಮತ್ತು ಪೂರೈಕೆ ಜವಾಬ್ದಾರಿಯನ್ನ ಭಾರತದಲ್ಲಿ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್​ ನೋಡಿಕೊಳ್ಳುತ್ತದೆ. ಲಸಿಕೆಯ ಮಾನವ ಪ್ರಯೋಗಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ಕೊಡಬೇಕು. ಅದರ ಬಳಿಕವೇ ಲಸಿಕೆ ಪ್ರಯೋಗ ಆರಂಭವಾಗುತ್ತೆ. ಅಂದ್ಹಾಗೆ ಹೆಟೆರೋ ಮತ್ತು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್​ ಎರಡೂ ಕೂಡ ಹೈದರಾಬಾದ್ ಮೂಲದ ಕಂಪನಿಗಳಾಗಿವೆ.

ಅಂದ್ಹಾಗೆ ರಷ್ಯಾದ ‘ಸ್ಪುಟ್ನಿಕ್-V’ ಲಸಿಕೆ 95% ಪರಿಣಾಮಕಾರಿ ಅಂತ ಇತ್ತೀಚೆಗೆ ಕಂಪನಿ ಘೋಷಿಸಿಕೊಂಡಿತ್ತು. ಇದನ್ನ ಗಮಲೇ ಇನ್​ಸ್ಟಿಟ್ಯೂಟ್​ ಮತ್ತು RDIF ಸೇರಿ ಅಭಿವೃದ್ಧಿಪಡಿಸಿವೆ.

-masthmagaa.com

Contact Us for Advertisement

Leave a Reply