masthmagaa.com:

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಇತರ ನಾಯಕರ ಕಾರುಗಳ ಮೇಲೆ ಕಲ್ಲು, ಇಟ್ಟಿಗೆಗಳನ್ನ ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಡಿಜಿಪಿ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಗೃಹ ಇಲಾಖೆ ಸಮನ್ಸ್ ನೀಡಿದೆ. ಹೀಗಾಗಿ ಪಶ್ಚಿಮ ಬಂಗಾಳದ ಉನ್ನತ ಅಧಿಕಾರಿಗಳಿಬ್ಬರು ಈಗ ದೆಹಲಿಗೆ ಹೋಗಬೇಕಿದೆ.

ನಿನ್ನೆ ಜೆ.ಪಿ. ನಡ್ಡಾ ಮತ್ತು ಬಿಜೆಪಿಯ ಇತರ ನಾಯಕರು ಹೋಗುತ್ತಿದ್ದಾಗ ಅವರ ಕಾರಿನ ಮೇಲೆ ಕಲ್ಲು, ಇಟ್ಟಿಗೆಗಳನ್ನ ತೂರಲಾಗಿತ್ತು. ಜೆ.ಪಿ. ನಡ್ಡಾ ಅವರ ಕಾರು ಬುಲೆಟ್​ ಪ್ರೂಫ್ ಆಗಿದ್ದರಿಂದ ಅವರಿಗೇನು ಆಗಿರಲಿಲ್ಲ. ಆದ್ರೆ ಬೇರೆ ನಾಯಕರಿಗೆ ಗಾಯಗಳಾಗಿದ್ದವು. ಇದರ ಹಿಂದೆ ಟಿಎಂಸಿ ಕಾರ್ಯಕರ್ತರ ಕೈವಾಡವಿದೆ. ಸರ್ಕಾರ ಮತ್ತು ಪೊಲೀಸರು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಅಂತ ಬಿಜೆಪಿ ಆರೋಪ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಗೆ ಸಮನ್ಸ್ ನೀಡಲಾಗಿದೆ.

-masthmagaa.com

Contact Us for Advertisement

Leave a Reply