ದೊಡ್ಡ ದಾಳಿಗೆ ಸಂಚು ರೂಪಿಸಿದ್ದ ಉಗ್ರರು ಫಿನಿಶ್.. ಭಾರೀ ಶಸ್ತ್ರಾಸ್ತ್ರಗಳು ಜಪ್ತಿ

masthmagaa.com:

ಜಮ್ಮು-ಕಾಶ್ಮೀರದ ಅನಂತ್​ನಾಗ್​ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಜೊತೆಗೆ ಉಗ್ರರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ. ನಿನ್ನೆ ಮತ್ತು ಮೊನ್ನೆ ಸೊಪೋರ್​ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು.

ನಿನ್ನೆ ನಡೆದ ಕಾರ್ಯಾಚರಣೆ ವೇಳೆ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಬಂದೂಕು, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಉಗ್ರರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ನೋಡಿದ್ರೆ ಭಾರತದಲ್ಲಿ ದೊಡ್ಡ ದಾಳಿ ನಡೆಸಬೇಕು ಅನ್ನೋದು ಅವರ ಪ್ಲಾನ್ ಆಗಿತ್ತು ಅಂತ ಜಮ್ಮು-ಕಾಶ್ಮೀರ ಪೊಲೀಸರು ಹೇಳಿದ್ದಾರೆ.

 

ಇದೆಲ್ಲದರ ನಡುವೆ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವನೆ ಇವತ್ತು ಭಾರತ-ಪಾಕ್ ಗಡಿಯ ಫಾರ್ವರ್ಡ್ ಏರಿಯಾಗಳಿಗೆ ಭೇಟಿ ನೀಡಿದ್ರು. ಈ ವೇಳೆ ಗಡಿಯಲ್ಲಿನ ಭದ್ರತಾ ಪರಿಸ್ಥಿತಿ ಮತ್ತು ಸೇನಾ ಸನ್ನದ್ಧತೆಯನ್ನ ಪರಿಶೀಲಿಸಿದ್ರು. ಭೂಸೇನಾ ಮುಖ್ಯಸ್ಥರಿಗೆ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ರು.

-masthmagaa.com

Contact Us for Advertisement

Leave a Reply