ಕಿಮ್ ಆರೋಗ್ಯದ ಬಗ್ಗೆ ನನಗೆ ಗೊತ್ತು..ಆದ್ರೆ ಹೇಳಂಗಿಲ್ಲ: ಟ್ರಂಪ್​​

masthmagaa.com:

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಗೊಂದಲಗಳು ಮುಂದುವರಿದಿವೆ. ಈ ನಡುವೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಆದ್ರೆ ನಾನು ಈ ಸಮಯದಲ್ಲಿ ನಿಮ್ಮ ಮುಂದೆ ಅದನ್ನು ಹೇಳಲು ಸಾಧ್ಯವಿಲ್ಲ.. ಸದ್ಯದಲ್ಲೇ ನಿಮಗೂ ಎಲ್ಲಾ ವಿಚಾರ ಗೊತ್ತಾಗುತ್ತೆ.. ಕಿಮ್ ಗುಣಮುಖರಾಗಲಿ ಅಂತ ಶುಭ ಹಾರೈಸುತ್ತೇನೆ ಅಂತ ಹೇಳಿದ್ದಾರೆ.

ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಸಾಕಷ್ಟು ಗೊಂದಲಗಳಿವೆ.. ಕೆಲವರು ಕಿಮ್ ಜಾಂಗ್ ಉನ್ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದ್ರೆ, ಇನ್ನು ಕೆಲವರು ಕಿಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ವಾದಿಸ್ತಿದ್ದಾರೆ. ನಿನ್ನೆಯಷ್ಟೇ ಕಿಮ್ ಜಾಂಗ್ ಉನ್ ಆರೋಗ್ಯವಾಗಿದ್ದಾರೆ ಅಂತ ದಕ್ಷಿಣ ಕೊರಿಯಾ ತಿಳಿಸಿತ್ತು.

ಏಪ್ರಿಲ್ 15ರಂದು ನಡೆದ ತನ್ನ ಅಜ್ಜನ 108ನೇ ಜನ್ಮ ದಿನಾಚರಣೆ ಸಂದರ್ಭದಲ್ಲೂ ಕಿಮ್ ಜಾಂಗ್ ಉನ್ ಗೈರಾಗಿದ್ದರು. ಈ ಕಾರ್ಯಕ್ರಮದಲ್ಲಿ ಈವರೆಗೆ ಕಿಮ್ ಗೈರಾಗಿರಲಿಲ್ಲ. ಇದು ಉತ್ತರ ಕೊರಿಯಾಗೆ ತುಂಬಾ ಪ್ರಮುಖ ದಿನವಾಗಿದೆ. ಆದ್ರೂ ಕಿಮ್ ಈ ಕಾರ್ಯಕ್ರಮದಿಂದ ದೂರ ಉಳಿದಿದ್ರು. ಕಿಮ್ ಹಾರ್ಟ್​ ಸರ್ಜರಿಗೆ ಒಳಗಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಇದೇ ಕಾರಣಕ್ಕೆ ಅವರು ತಮ್ಮ ಅಜ್ಜನ 108ನೇ ಜನ್ಮ ದಿನಾಚರಣೆಯಲ್ಲಿ ಭಾಗಿಯಾಗಲಿಲ್ಲ ಎಂದು ಈ ಹಿಂದೆ ವರದಿಯಾಗಿತ್ತು.

-masthmagaa.com

Contact Us for Advertisement

Leave a Reply