masthmagaa.com:

ಜಮ್ಮು-ಕಾಶ್ಮೀರಕ್ಕೆ ಈ ಹಿಂದೆ ನೀಡಿದ್ದ ವಿಶೇಷ ಸ್ಥಾನಮಾನವನ್ನ ಮರಳಿ ಪಡೆಯಲು ಅಲ್ಲಿನ ನಾಯಕರು ಮೈತ್ರಿಕೂಟ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದಾರೆ. ನ್ಯಾಷನಲ್ ಕಾನ್ಪರೆನ್ಸ್​ ಪಕ್ಷದ ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇದರ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಇವರ ಹೋರಾಟಕ್ಕೆ ಪ್ರತಿಕ್ರಿಯಿಸಿರೋ ಶಿವಸೇನಾ ನಾಯಕ ಸಂಜಯ್ ರಾವತ್, ‘ಫಾರೂಕ್ ಅಬ್ದುಲ್ಲಾ ಬೇಕಿದ್ರೆ ಪಾಕಿಸ್ತಾನಕ್ಕೆ ಹೋಗಲಿ. ಅಲ್ಲಿ ಆರ್ಟಿಕಲ್ 370 ಜಾರಿಗೆ ತರಲಿ. ಆದ್ರೆ ಭಾರತದಲ್ಲಿ ಆರ್ಟಿಕಲ್ 370 ಮತ್ತು 35Aಗೆ ಜಾಗವಿಲ್ಲ’ ಅಂತ ಹೇಳಿದ್ದಾರೆ.

ನಿನ್ನೆಯಷ್ಟೇ ಮಾತನಾಡಿದ್ದ ಫಾರೂಕ್ ಅಬ್ದುಲ್ಲಾ, ‘ಜಮ್ಮ-ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು ಅಂತಿದ್ರೆ 1947ರಲ್ಲೇ ಸೇರುತ್ತಿತ್ತು. ಅದನ್ನ ಯಾರೂ ತಡೆಯೋಕೆ ಆಗ್ತಿರಲಿಲ್ಲ’ ಅಂತ ಹೇಳಿದ್ದರು. ಫಾರೂಕ್ ಅಬ್ದುಲ್ಲಾ ಅವರ ಈ ಹೇಳಿಕೆಗೆ ಇಂದು ಸಂಜಯ್ ರಾವತ್ ತಿರುಗೇಟು ಕೊಟ್ಟಂತಿದೆ.

-masthmagaa.com

Contact Us for Advertisement

Leave a Reply