ಕಾಂಗ್ರೆಸ್ ಸೋಲಿಗೆ ಸೋನಿಯಾ, ಸಿಂಗ್ ಕಾರಣ..! ಪ್ರಣಬ್ ಪುಸ್ತಕದಲ್ಲಿ ಟೀಕೆ

masthmagaa.com:

ದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ನೆನಪಿನ ಬುತ್ತಿಗಳನ್ನೊಳಗೊಂಡ ಫೈನಲ್ ವಾಲ್ಯೂಮ್ ಪುಸ್ತಕದಲ್ಲಿ ಹಲವು ರೋಚಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. 2014ರ ಸೋಲಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಕಾರಣ ಎಂದಿರುವ ಪ್ರಣಬ್ ಮುಖರ್ಜಿ, ಸೋನಿಯಾ ಗಾಂಧಿಯವರಿಗೆ ಪಕ್ಷವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಅಂತ ಬರೆದಿದ್ದಾರೆ.

2004ರಲ್ಲಿ ನಾನೇ ಪ್ರಧಾನಿಯಾಗಿದ್ದರೆ 2014ರಲ್ಲಿ ಪಕ್ಷಕ್ಕೆ ಇಂಥಾ ಸೋಲು ಬರುತ್ತಿರಲಿಲ್ಲ ಅಂತ ಪಕ್ಷದಲ್ಲಿ ಎಷ್ಟೋ ಜನರ ಅಭಿಪ್ರಾಯವಾಗಿತ್ತು. ಆದ್ರೆ ನಾನು ಈ ವಿಚಾರವನ್ನು ಒಪ್ಪುವುದಿಲ್ಲ. ನನ್ನನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ ನಂತರ ಪಕ್ಷದ ನೇತೃತ್ವ ರಾಜಕೀಯದತ್ತ ಅಷ್ಟೊಂದು ಗಮನ ನೀಡಲಿಲ್ಲ. ಸೋನಿಯಾ ಗಾಂಧಿಯವರ ಅಸಮರ್ಥತೆ ಮತ್ತು ಸದನದಲ್ಲಿ ಮನಮೋಹನ್ ಸಿಂಗ್ ಅವರ ದೀರ್ಘಕಾಲದ ಅನುಪಸ್ಥಿತಿ ಇತರೆ ಸಂಸದರ ಜೊತೆಗಿನ ಸಂಪರ್ಕವನ್ನೇ ಕಡಿದು ಹಾಕುವಂತೆ ಮಾಡಿತು ಅಂತ ಬರೆದುಕೊಂಡಿದ್ದಾರೆ.

ಪ್ರಣಬ್ ಮುಖರ್ಜಿಯವರ ಈ ಪುಸ್ತಕ ಜನವರಿಯಲ್ಲಿ ರಿಲೀಸ್ ಆಗಲಿದೆ. ಈ ಪುಸ್ತಕದಲ್ಲಿ ಕಾಂಗ್ರೆಸ್ 2014ರ ಲೋಕಸಭೆ ಚುನಾವಣೆಯಲ್ಲಿ ಕೆಟ್ಟ ರೀತಿಯಲ್ಲಿ ಸೋತಿದ್ದು ಹೇಗೆ ಅನ್ನೋದನ್ನ ಪ್ರಣಬ್ ಮುಖರ್ಜಿಯವರು ಸಂಪೂರ್ಣವಾಗಿ ವಿವರಿಸಿದ್ದಾರೆ. ಜೊತೆಗೆ ಇದರ ಕೆಲವೊಂದು ಅಂಶಗಳು ಪುಸ್ತಕ ಬಿಡುಗಡೆಗೂ ಮುನ್ನವೇ ರಾಜಕೀಯ ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply