masthmagaa.com:

ಭಾರತೀಯರು ಮತ್ತು ಭಾರತದಲ್ಲಿರುವ ವಿದೇಶಿಯರು ಚೀನಾಗೆ ಪ್ರವೇಶಿಸದಂತೆ ಚೀನಾ ಸರ್ಕಾರ ನಿರ್ಬಂಧ ಹೇರಿದೆ. ಇದಕ್ಕೆಲ್ಲಾ ಕಾರಣ ಕೊರೋನಾ.. ಹೌದು ಕೊರೋನಾ ಹಿನ್ನೆಲೆ ಚೀನಾದ ವೀಸಾ ಅಥವಾ ರೆಸಿಡೆನ್ಸ್ ಪರ್ಮಿಟ್​ಗಳನ್ನ ಅಮಾನತು ಮಾಡಲಾಗಿದೆ ಅಂತ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ತಿಳಿಸಿದೆ. ಆದ್ರೆ ಇದು ಭಾರತದಲ್ಲಿರುವ ಚೀನೀ ಪ್ರಜೆಗಳಿಗೆ ಅನ್ವಯಿಸುವುದಿಲ್ಲ. ಅವರು ಯಾವಾಗ ಬೇಕಾದ್ರೂ ತಮ್ಮ ತಾಯ್ನಾಡಿಗೆ ಹೋಗಲು ಅವಕಾಶವಿದೆ. ಜೊತೆಗೆ ನವೆಂಬರ್ 3ರ ನಂತರ ಕೊಟ್ಟ ವೀಸಾ ಇದ್ದವರು ಕೂಡ ಚೀನಾಗೆ ಹೋಗಬಹುದು.

ಮತ್ತೊಂದುಕಡೆ ಕೊರೋನಾ ಸೋಂಕಿನ ಎರಡನೇ ಅಲೆ ಎದ್ದಿರುವ ಫ್ರಾನ್ಸ್​ ಮೇಲೂ ಚೀನಾ ನಿರ್ಬಂಧ ಹೇರಿದೆ. ಚೀನಿಯರನ್ನ ಹೊರತುಪಡಿಸಿ ಫ್ರಾನ್ಸ್​ನಿಂದ ಯಾರೂ ಕೂಡ ಚೀನಾಗೆ ಬರುವಂತಿಲ್ಲ ಅಂತ ಘೋಷಿಸಲಾಗಿದೆ. ಬ್ರಿಟನ್, ಬೆಲ್ಜಿಯಂ, ಫಿಲಿಪ್ಪೀನ್ಸ್, ರಷ್ಯಾ, ಇಟಲಿ, ಇಥಿಯೋಪಿಯಾ ರಾಷ್ಟ್ರಗಳ ಮೇಲೂ ಚೀನಾ ಇಂತಹದ್ದೇ ನಿರ್ಬಂಧವನ್ನ ಹೇರಿದೆ. ಈ ಪ್ರವೇಶ ನಿರ್ಬಂಧ ತಾತ್ಕಾಲಿಕ ಅಂತ ಚೀನಾ ಹೇಳಿದೆ.

ಆರಂಭದಲ್ಲಿ ಕೊರೋನಾ ಸೋಂಕು ಸ್ಫೋಟಗೊಂಡಾಗ ಅಂತಾರಾಷ್ಟ್ರೀಯ ಪ್ರಯಾಣದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ತಂದಿದ್ದ ಚೀನಾ ಕೊರೋನಾವನ್ನು ಕಂಟ್ರೋಲ್ ಮಾಡಿತ್ತು. ಬಳಿಕ ನಿಧಾನವಾಗಿ ನಿರ್ಬಂಧಗಳನ್ನ ಸಡಿಲ ಮಾಡ್ತಾ ಬಂತು. ಇದೀಗ ಫ್ರಾನ್ಸ್, ಬ್ರಿಟನ್, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ. ಹೀಗಾಗಿ ಈ ದೇಶಗಳಿಂದ ತನ್ನ ದೇಶಕ್ಕೇನಾದ್ರೂ ಸೋಂಕು ಬಂದುಬಿಡುತ್ತಾ ಅನ್ನೋ ಭಯದಲ್ಲಿ ಈ ದೇಶಗಳಿಂದ ಯಾರೂ ಬರದಂತೆ ನಿರ್ಬಂಧ ಹೇರಿದೆ. ಆದ್ರೆ ತುಂಬಾ ಅಗತ್ಯ ಇದ್ದವರು ಆಯಾ ದೇಶದಲ್ಲಿರುವ ಚೀನಾ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಬಹುದು.

-masthmagaa.com

Contact Us for Advertisement

Leave a Reply