ಭಾರತದಲ್ಲಿ 9 ಕೋಟಿ ದಾಟಿದ ಕೊರೋನಾ ಪರೀಕ್ಷೆಗಳ ಸಂಖ್ಯೆ..!

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 63,509 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಕಳೆದ ತಿಂಗಳಲ್ಲಿ ಪ್ರತಿದಿನ ದೃಢಪಡುತ್ತಿದ್ದ ಪ್ರಕರಣಗಳಿಗೆ ಹೋಲಿಸಿದ್ರೆ ಇದು ಕಡಿಮೆನೇನೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 72.39 ಲಕ್ಷ ದಾಟಿದೆ.

ಕಳೆದ 24 ಗಂಟೆಗಳಲ್ಲಿ 730 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1.10 ಲಕ್ಷ ದಾಟಿದೆ. ಒಂದು ದಿನದಲ್ಲಿ 74,000+ ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 63.01 ಲಕ್ಷ ದಾಟಿದೆ. ದೇಶದಲ್ಲಿ ಇನ್ನೂ ಕೂಡ 8.26 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 87.05% ಇದ್ದು, ಸಾವಿನ ಪ್ರಮಾಣ 1.53% ಇದೆ. ಅಕ್ಟೋಬರ್ 13ರಂದು 11.45 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಮೂಲಕ ದೇಶದಲ್ಲಿ ಇದುವರೆಗೆ ನಡೆಸಿದ ಒಟ್ಟು ಕೊರೋನಾ ಪರೀಕ್ಷೆಗಳ ಸಂಖ್ಯೆ 9 ಕೋಟಿ ದಾಟಿದೆ. ದೇಶದಲ್ಲಿ ಪಾಸಿಟಿವಿಟಿ ರೇಟ್ 6 ಪರ್ಸೆಂಟ್​ಗೆ ಇಳಿಕೆಯಾಗಿದೆ ಇದೆ. ಅಂದ್ರೆ 100 ಕೊರೋನಾ ಪರೀಕ್ಷೆಗಳನ್ನ ಮಾಡಿದ್ರೆ 6 ಜನರಿಗೆ ಪಾಸಿಟಿವ್ ಬರ್ತಿದೆ ಅಂತ ಅರ್ಥ.

-masthmagaa.com

Contact Us for Advertisement

Leave a Reply