ದೇಶದಲ್ಲಿ 24 ಗಂಟೆಯಲ್ಲಿ ದೃಢಪಟ್ಟ ಕೊರೋನಾ ಪ್ರಕರಣಗಳೆಷ್ಟು ಗೊತ್ತಾ?

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 20,021 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿ 2 ಲಕ್ಷದ 7 ಸಾವಿರ ದಾಟಿದೆ. 279 ಮಂದಿ ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,47,901ಕ್ಕೆ ಏರಿಕೆಯಾಗಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ 21,000ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 97.82 ಲಕ್ಷ ದಾಟಿದೆ. ದೇಶದಲ್ಲಿ ಇನ್ನೂ ಕೂಡ 2.77 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದಲ್ಲಿ ಗುಣಮುಖ ಪ್ರಮಾಣ ಶೇ.95.83ಕ್ಕೆ ಏರಿಕೆಯಾಗಿದ್ದು, ಸಾವಿನ ಪ್ರಮಾಣ ಶೇ. 1.45ರಷ್ಟು ಇದೆ. ಡಿಸೆಂಬರ್ 27ರಂದು 7.15 ಲಕ್ಷ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ಒಟ್ಟು 16.88 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ.

-masthmagaa.com
Contact Us for Advertisement

Leave a Reply