ದೇಶದಲ್ಲಿ ಹೆಚ್ಚಾಗ್ತಿದೆ ಸಕ್ರಿಯ ಪ್ರಕರಣ.. ಗುಣಮುಖ ಪ್ರಮಾಣದಲ್ಲೂ ಇಳಿಕೆ..!

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 44,489 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 524 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 92.66 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,35,223 ಆಗಿದೆ.

ಕಳೆದ 24 ಗಂಟೆಗಳಲ್ಲಿ 36,000+ ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 86.79 ಲಕ್ಷ ದಾಟಿದೆ. ದೇಶದಲ್ಲಿ ಇನ್ನೂ ಕೂಡ 4.52 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖ ಪ್ರಮಾಣ 93.66% ಇದ್ದು, ಸಾವಿನ ಪ್ರಮಾಣ 1.46% ರಷ್ಟಿದೆ. ನವೆಂಬರ್‌ 25ರಂದು 10.90 ಲಕ್ಷ ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 13.59 ಕೋಟಿ ಕೊರೋನಾ ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ದೇಶದಲ್ಲಿ ಕಳೆದ ಕೆಲ ದಿನಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಜೊತೆಗೆ ಗುಣಮುಖ ಪ್ರಮಾಣವೂ ಸ್ವಲ್ಪ ಕಮ್ಮಿಯಾಗಿದೆ.

ಅತಿ ಹೆಚ್ಚು ಸೋಂಕು ದೃಢಪಟ್ಟ ರಾಜ್ಯಗಳು:

ಕೇರಳ – 6,491

ಮಹಾರಾಷ್ಟ್ರ – 6,159

ದೆಹಲಿ – 5,246

ರಾಜಸ್ಥಾನ – 3,285

ಕರ್ನಾಟಕ – 1,630

ಗುಜರಾತ್ – 1,540

ತಮಿಳುನಾಡು – 1,534

ಆಂಧ್ರಪ್ರದೇಶ – 831

-masthmagaa.com

Contact Us for Advertisement

Leave a Reply