ದೇಶದಲ್ಲಿ ನಿಲ್ಲುತ್ತಿಲ್ಲ ಕೊರೋನಾ ಹಾವಳಿ.. ಒಂದೂವರೆ ನಿಮಿಷಕ್ಕೆ ಒಬ್ಬರು ಸಾವು

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 56,282 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 904 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಅಂದ್ರೆ ಒಂದೂವರೆ ನಿಮಿಷಕ್ಕೆ ಒಬ್ಬರು ಮೃತಪಟ್ಟಿದ್ದಾರೆ ಅಂತ ಅರ್ಥ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 19.64 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 40,699 ಆಗಿದೆ. 

ಕಳೆದ 24 ಗಂಟೆಗಳಲ್ಲಿ 46,000+ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 13.28 ಲಕ್ಷ ಸೋಂಕಿತರು ಗುಣಮುಖರಾದಂತಾಗಿದ್ದು 5.95 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಗುಣಮುಖ ಪ್ರಮಾಣ 67.62 ಪರ್ಸೆಂಟ್ ಇದೆ. ಸಾವಿನ ಪ್ರಮಾಣ 2.07 ಪರ್ಸೆಂಟ್ ಇದೆ. ಆಗಸ್ಟ್​ 4ರಂದು 6.64 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 2.21 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.46 ಲಕ್ಷ ಪ್ರಕರಣ (16,000+ ಸಾವು)

2. ಆಂಧ್ರಪ್ರದೇಶ: 80,000+ ಪ್ರಕರಣ (1,600+ ಸಾವು)

3. ಕರ್ನಾಟಕ: 73,000+ ಪ್ರಕರಣ (2,800+ ಸಾವು)

4. ತಮಿಳುನಾಡು: 54,000+ ಪ್ರಕರಣ (4,400+ ಸಾವು)

5. ಉತ್ತರಪ್ರದೇಶ: 41,000+ ಪ್ರಕರಣ (1,800+ ಸಾವು)

6. ಪಶ್ಚಿಮ ಬಂಗಾಳ: 22,000+ ಪ್ರಕರಣ (1,800+ ಸಾವು)

7. ಬಿಹಾರ: 22,000+ ಪ್ರಕರಣ (355 ಸಾವು)

8. ತೆಲಂಗಾಣ: 20,000+ ಪ್ರಕರಣ (589 ಸಾವು)

9. ಗುಜರಾತ್: 14,000+ ಪ್ರಕರಣ (2,500+ ಸಾವು)

10. ಅಸ್ಸಾಂ: 14,000+ ಪ್ರಕರಣ (121 ಸಾವು)

-masthmagaa.com

Contact Us for Advertisement

Leave a Reply