masthmagaa.com:

ಭಾರತ ಮತ್ತು ಇಂಗ್ಲೆಂಡ್​ ನಡುವೆ 2021ರ ಫೆಬ್ರವರಿ ಮತ್ತು ಮಾರ್ಚ್​ನಲ್ಲಿ ಭಾರತದಲ್ಲಿ ಕ್ರಿಕೆಟ್​ ಸರಣಿ ನಡೆಯಲಿದೆ. ಇದು 4 ಟೆಸ್ಟ್, 5 ಟಿ-20 ಮತ್ತು 3 ಏಕದಿನ ಪಂದ್ಯಗಳನ್ನ ಒಳಗೊಂಡಿದೆ. ಇದರ ಟೈಂ ಟೇಬಲ್ ಅನ್ನು ಬಿಸಿಸಿಐ ಮತ್ತು ಇಸಿಬಿ ಘೋಷಣೆ ಮಾಡಿದೆ. ಇಡೀ ಸರಣಿಯು ಚೆನ್ನೈ, ಅಹಮದಾಬಾದ್ ಮತ್ತು ಪುಣೆಯಲ್ಲಿ ಮಾತ್ರ ನಡೆಯಲಿದೆ. ಬೆಂಗಳೂರು ಅಥವಾ ಬೇರೆ ಯಾವುದೇ ನಗರದಲ್ಲಿ ಯಾವ ಪಂದ್ಯ ಕೂಡ ನಡೆಯಲ್ಲ. ಚೆನ್ನೈ ಮತ್ತು ಅಹಮದಾಬಾದ್​ನಲ್ಲಿ ತಲಾ ಎರಡು ಟೆಸ್ಟ್​ ಪಂದ್ಯಗಳು ನಡೆದ್ರೆ, ಟಿ-20 ಸರಣಿಯ ಐದೂ ಪಂದ್ಯಗಳು ಅಹಮದಾಬಾದ್​ನಲ್ಲಿ ನಡೆಯಲಿದೆ. ಏಕದಿನ ಸರಣಿಯ ಮೂರೂ ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ. ಫೆಬ್ರವರಿ 24ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ 3ನೇ ಟೆಸ್ಟ್​ ಪಂದ್ಯವು ಡೇ-ನೈಟ್ ಪಿಂಕ್ ಬಾಲ್ ಪಂದ್ಯವಾಗಿದೆ.

ಟೆಸ್ಟ್ ಸರಣಿ:

ಮೊದಲ ಟೆಸ್ಟ್:  ಫೆ. 5ರಿಂದ 9 – ಚೆನ್ನೈ

ಎರಡನೇ ಟೆಸ್ಟ್: ಫೆ. 13ರಿಂದ 17 – ಚೆನ್ನೈ

ಮೂರನೇ ಟೆಸ್ಟ್: ಫೆ. 24ರಿಂದ 28 – ಅಹಮದಾಬಾದ್

ನಾಲ್ಕನೇ ಟೆಸ್ಟ್: ಮಾ. 4ರಿಂದ 8 – ಅಹಮದಾಬಾದ್

 

ಟಿ-20 ಸರಣಿ:

ಮೊದಲ ಟಿ-20: ಮಾರ್ಚ್ 12 – ಅಹಮದಾಬಾದ್

ಎರಡನೇ ಟಿ-20: ಮಾರ್ಚ್ 14 – ಅಹಮದಾಬಾದ್

ಮೂರನೇ ಟಿ-20: ಮಾರ್ಚ್ 16 – ಅಹಮದಾಬಾದ್

ನಾಲ್ಕನೇ ಟಿ-20: ಮಾರ್ಚ್ 18 – ಅಹಮದಾಬಾದ್

ಐದನೇ ಟಿ-20: ಮಾರ್ಚ್ 20 – ಅಹಮದಾಬಾದ್

 

ಏಕದಿನ ಸರಣಿ:

ಮೊದಲ ಪಂದ್ಯ: ಮಾರ್ಚ್ 23 – ಪುಣೆ

ಎರಡನೇ ಪಂದ್ಯ: ಮಾರ್ಚ್ 26 – ಪುಣೆ

ಮೂರನೇ ಪಂದ್ಯ: ಮಾರ್ಚ್ 28 – ಪುಣೆ

-masthmagaa.com

Contact Us for Advertisement

Leave a Reply