ದೇಶದಲ್ಲಿ ಮೊದಲ 1 ಲಕ್ಷ ಪ್ರಕರಣಕ್ಕೆ 107 ದಿನ.. ಈಗ ಬರೀ 6 ದಿನ..!

masthmagaa.com:

ಇಡೀ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರೋ ಕೊರೋನಾ ವೈರಸ್ ಭಾರತದಲ್ಲಿ ಭಾರಿ ವೇಗದಲ್ಲಿ ಹರಡುತ್ತಿದೆ. 6 ದಿನಗಳ ಹಿಂದಷ್ಟೇ 4 ಲಕ್ಷ ಇದ್ದ ಕೊರೋನಾ ಸೋಂಕಿತರ ಸಂಖ್ಯೆ ಈಗ 5 ಲಕ್ಷ ದಾಟಿದೆ. ಕೇವಲ 6 ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಅಷ್ಟು ತೀವ್ರವಾಗಿ ವ್ಯಾಪಿಸುತ್ತಿದೆ ಮಾರಣಾಂತಿಕ ಕೊರೋನಾ.

ದೇಶದಲ್ಲಿ ಮೊದಲ ಕೊರೋನಾ ಪ್ರಕರಣ ದೃಢಪಟ್ಟಿದ್ದು ಜನವರಿ 30ರಂದು. ಚೀನಾದಿಂದ ಕೇರಳಕ್ಕೆ ಬಂದಿದ್ದ ವಿದ್ಯಾರ್ಥಿನಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ಒಂದೊಂದೇ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಮಹಾಮಾರಿ ವ್ಯಾಪಿಸಿತು. ಸದ್ಯ ದೇಶದಲ್ಲಿ ಲಕ್ಷದ್ವೀಪ ಹೊರತುಪಡಿಸಿ ಉಳಿದೆಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಕ್ಕೆ ಕೊರೋನಾ ಕಾಲಿಟ್ಟಿದೆ.

ದೇಶದಲ್ಲಿ ಕೊರೋನಾ ವೇಗ ಹೇಗಿದೆ..?

1 ರಿಂದ 1 ಲಕ್ಷ ಪ್ರಕರಣ ದೃಢಪಡಲು 107 ದಿನ

1 ಲಕ್ಷದಿಂದ 2 ಲಕ್ಷ ಪ್ರಕರಣ ದೃಢಪಡಲು 15 ದಿನ

2 ಲಕ್ಷದಿಂದ 3 ಲಕ್ಷ ಪ್ರಕರಣ ದೃಢಪಡಲು 10 ದಿನ

3 ಲಕ್ಷದಿಂದ 4 ಲಕ್ಷ ಪ್ರಕರಣ ದೃಢಪಡಲು 8 ದಿನ

4 ಲಕ್ಷದಿಂದ 5 ಲಕ್ಷ ಪ್ರಕರಣ ದೃಢಪಡಲು 6 ದಿನ

-masthmagaa.com

Contact Us for Advertisement

Leave a Reply