masthmagaa.com:

ಭಾರತ-ಚೀನಾ ನಡುವೆ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಗಡಿಯಲ್ಲಿ ಆಯುಧ ಪೂಜೆ ನಡೆಸಲು ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂಗೆ 2 ದಿನ ಪ್ರವಾಸ ಕೈಗೊಂಡಿದ್ದಾರೆ. ಮೊದಲ ದಿನವಾದ ಇಂದು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್​​ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕಕ್ಕೆ (Sukna War Memorial) ಭೇಟಿ ನೀಡಿದ ರಕ್ಷಣಾ ಸಚಿವರು ಆಯುಧ ಪೂಜೆ ನೆರವೇರಿಸಿದ್ರು. ಈ ವೇಳೆ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವನೆ ಕೂಡ ಭಾಗವಹಿಸಿದ್ದರು.

ಬಳಿಕ ಮಾತನಾಡಿದ ರಾಜ್​ನಾಥ್ ಸಿಂಗ್, ‘ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟು ಶಮನವಾಗಲಿ ಮತ್ತು ಶಾಂತಿ ನೆಲಸಲಿ ಅಂತ ಭಾರತ ಬಯಸುತ್ತದೆ. ಅಟ್​ ದಿ ಸೇಮ್ ಟೈಂ, ದೇಶದ ಒಂದಿಂಚೂ ಭೂಮಿಯನ್ನೂ ಕೂಡ ನಮ್ಮ ಯೋಧರು ಯಾರಿಗೂ ಬಿಟ್ಟುಕೊಡುವುದಿಲ್ಲ ಎಂಬ ವಿಶ್ವಾಸ ನನಗಿದೆ’ ಅಂತ ಹೇಳಿದ್ದಾರೆ. ನಂತರ ಬಾರ್ಡರ್ ರೋಡ್ಸ್​ ಆರ್ಗನೈಸೇಷನ್ (BRO) ನಿರ್ಮಿಸಿರುವ ರಸ್ತೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ರು.

-masthmagaa.com

Contact Us for Advertisement

Leave a Reply