ಗಡಿಯಲ್ಲಿ ಪರಿಸ್ಥಿತಿ ಗಂಭೀರ: ಯಾವುದೇ ಸವಾಲು ಎದುರಿಸಲು ಭಾರತ ಸಿದ್ಧ

masthmagaa.com:

ಭಾರತ-ಚೀನಾ ನಡುವೆ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲೇ ಲೇಹ್​ಗೆ ಭೇಟಿ ನೀಡಿರುವ ಭೂಸೇನಾ ಮುಖ್ಯಸ್ಥ ಎಂ.ಎಂ. ನರಾವನೆ, ‘ವಾಸ್ತವ ನಿಯಂತ್ರಣ ರೇಖೆ ಬಳಿ ಪರಿಸ್ಥಿತಿ ಗಂಭೀರವಾಗಿದೆ. ಆದ್ರೆ ಮುಂಜಾಗ್ರತೆಗಾಗಿ ಭಾರತೀಯ ಸೇನೆ ಕೈಗೊಂಡಿರುವ ಕ್ರಮಗಳು ಪರಿಸ್ಥಿತಿ ನಿಯಂತ್ರಿಸಲು ಸಹಕಾರಿಯಾಗಲಿದೆ’ ಅಂತ ಹೇಳಿದ್ದಾರೆ

ಲೇಹ್​ ಭಾಗದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಎಂ.ಎಂ. ನರಾವನೆ ಪರಿಸ್ಥಿತಿಯನ್ನು ಪರಿಶೀಲಿಸಿದ್ರು. ನಂತರ ಮಾತನಾಡಿ ‘ನಮ್ಮ ಯೋಧರ ಆತ್ಮಸ್ಥೈರ್ಯ ತುಂಬಾ ಹೆಚ್ಚಿದೆ. ಅವರು ಯಾವುದೇ ಸವಾಲುಗಳನ್ನ ಎದುರಿಸಲು ಸಿದ್ಧರಿದ್ದಾರೆ’ ಅಂತ ಹೇಳಿದ್ರು.

‘ಸದ್ಯ ವಾಸ್ತವ ನಿಯಂತ್ರಣ ರೇಖೆ ಬಳಿ ಪರಿಸ್ಥಿತಿ ಸ್ವಲ್ಪ ಸೂಕ್ಷ್ಮ ಮತ್ತು ಗಂಭೀರವಾಗಿದೆ. ನಾವು ಈ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ನಮ್ಮ ಸುರಕ್ಷತೆಗಾಗಿ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡಿದ್ದೇವೆ. ಈ ಕ್ರಮಗಳು ನಮಗೆ ಸಹಕಾರಿಯಾಗಲಿದೆ’ ಅಂತ ನರಾವನೆ ಹೇಳಿದ್ದಾರೆ.

ಅಂದ್ಹಾಗೆ ಲಡಾಖ್‌ ಭಾಗದಲ್ಲಿ ಅತಿಕ್ರಮಣ ಮಾಡುವ ಚೀನಾ ಸೇನೆಯ ಪ್ರಯತ್ನಗಳನ್ನ ಭಾರತೀಯ ಸೇನೆ ವಿಫಲಗೊಳಿಸಿದ ನಂತರ ಉಭಯ ಸೈನ್ಯದ ನಡುವೆ ಬ್ರಿಗೇಡಿಯರ್ ಮಟ್ಟದ ಮಾತುಕತೆ ನಡೆಯುತ್ತಿದೆ. ಆದ್ರೆ ಇದುವರೆಗೆ ಅದು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಏಪ್ರಿಲ್-ಮೇ ತಿಂಗಳಿನಿಂದಲೂ ಗಡಿ ಪ್ರದೇಶಗಳಾದ ಫಿಂಗರ್ ಏರಿಯಾ, ಗಾಲ್ವಾನ್ ಕಣಿವೆ, ಹಾಟ್​ ಸ್ಪ್ರಿಂಗ್ಸ್​ ಮತ್ತು ಕೊಂಗ್ರುಂಗ್​ ನಾಲಾ ಮುಂತಾದ ಕಡೆಗಳಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ.

-masthmagaa.com

Contact Us for Advertisement

Leave a Reply