masthmagaa.com:

ಭಾರತ-ಚೀನಾ ನಡುವೆ ಲಡಾಖ್ ಪೂರ್ವ ಭಾಗದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಕಳೆದ ಮೂರು ವಾರಗಳಲ್ಲಿ ಭಾರತೀಯ ಸೇನೆ ವಾಸ್ತವ ನಿಯಂತ್ರಣ ರೇಖೆ (LAC) ಬಳಿಯ 6 ಪ್ರಮುಖ ಬೆಟ್ಟ, ಗುಡ್ಡಗಳನ್ನು ಹೊಸದಾಗಿ ವಶಪಡಿಸಿಕೊಂಡಿದೆ ಅಂತ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಇದರಲ್ಲಿ ಮಗರ್ ಬೆಟ್ಟ, ಗುರುಂಗ್ ಬೆಟ್ಟ, ರೆಸೆಹೆನ್ ಲಾ, ರೆಝಾಂಗ್, ಮೋಖ್​ಪರಿ ಮತ್ತು ಫಿಂಗರ್-4 ಬಳಿಯ ಚೀನೀ ಸ್ಥಾನಗಳಿಗಿಂತಲೂ ಎತ್ತರ ಪ್ರದೇಶಗಳು ಸೇರಿವೆ.

ಹೆಚ್ಚು ಸಕ್ರಿಯವಾಗಿರದ ಈ ಬೆಟ್ಟ, ಗುಡ್ಡಗಳ ಮೇಲೆ ಚೀನೀ ಸೈನಿಕರು ಬಂದು ಕುಳಿತುಕೊಳ್ಳಲು ಯತ್ನಿಸುತ್ತಿದ್ದರು. ಆದ್ರೆ ಅದಕ್ಕೂ ಮೊದಲೇ ನಮ್ಮ ಯೋಧರು ಇವುಗಳನ್ನು ವಶಪಡಿಸಿಕೊಂಡರು. ಸದ್ಯ ಈ ಪ್ರದೇಶದಲ್ಲಿ ಚೀನಾಗಿಂತ ನಮ್ಮ ಸೇನೆಯೇ  ಹೆಚ್ಚು ಪ್ರಭಾವ ಹೊಂದಿದೆ ಅಂತ ಮೂಲಗಳು ತಿಳಿಸಿವೆ.

ಇಂತಹ ಎತ್ತರದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ವಿಫಲವಾದ ಚೀನೀ ಸೈನಿಕರು ಪ್ಯಾಂಗಾಂಗ್​ ಸೋ ಸರೋವರದ ಉತ್ತರ ದಡದಿಂದ ದಕ್ಷಿಣದ ದಡದವರೆಗೆ ಕನಿಷ್ಠ ಮೂರು ಸಂದರ್ಭಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ರು. ಈ 6 ಬೆಟ್ಟ-ಗುಡ್ಡಗಳನ್ನ ಭಾರತೀಯ ಸೇನೆ ವಶಪಡಿಸಿಕೊಂಡ ನಂತರ LAC ಬಳಿ ಚೀನಾ ಸೇನೆ ಹೆಚ್ಚುವರಿಯಾಗಿ 3,000 ಸೈನಿಕರನ್ನು ನಿಯೋಜಿಸಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply