masthmagaa.com:

ಭಾರತ-ಚೀನಾ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಅಮೆರಿಕದಿಂದ 2 ‘ಪ್ರಿಡೇಟರ್’ ಡ್ರೋನ್​ಗಳನ್ನ ಲೀಸ್​ಗೆ ಪಡೆದಿರುವ ಭಾರತ ಅವುಗಳನ್ನ ನೌಕಾಸೇನೆಗೆ ಸೇರ್ಪಡೆಗೊಳಿಸಿದೆ. ಈ ಡ್ರೋನ್​ಗಳನ್ನ ಹಿಂದೂ ಮಹಾ ಸಾಗರದಲ್ಲಿ ಕಣ್ಗಾಗವಲು ಇಡಲು ಬಳಸಿಕೊಳ್ಳಲಾಗಿದೆ. ಇದರ ಜೊತೆಗೆ ಪೂರ್ವ ಲಡಾಖ್​​ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (LAC) ಬಳಿಯೂ ಈ ಪ್ರಿಡೇಟರ್ ಡ್ರೋನ್​ಗಳನ್ನ ನಿಯೋಜಿಸಬಹುದಾಗಿದೆ. ಭಾರತ-ಚೀನಾ ಗಡಿ ಸಂಘರ್ಷ ಶುರುವಾದಾಗ ಭಾರತೀಯ ಸೇನೆಗೆ ಶಸ್ತ್ರಾಸ್ತ್ರಗಳನ್ನ ಸಂಗ್ರಹಿಸಿಟ್ಟುಕೊಳ್ಳಲು ರಕ್ಷಣಾ ಇಲಾಖೆ ತುರ್ತು ಅನುದಾನವನ್ನ ಬಿಡುಗಡೆ ಮಾಡಿತ್ತು. ಈ ಅನುದಾನದಲ್ಲೇ ಡ್ರೋನ್​ಗಳನ್ನ ಲೀಸ್​ಗೆ ಪಡೆಯಲಾಗಿದೆ.

-masthmagaa.com

Contact Us for Advertisement

Leave a Reply