masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 96,424 ಜನರಿಗೆ ಸೋಂಕು ದೃಢಪಟ್ಟಿದ್ದು 1,174 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 52.14 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 84,372 ಆಗಿದೆ.

ಕಳೆದ 24 ಗಂಟೆಗಳಲ್ಲಿ ದಾಖಲೆಯ 87,000+ ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 41.12 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10.17 ಲಕ್ಷ ಆಗಿದೆ. ಅಂದ್ರೆ ಇಷ್ಟು ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಅರ್ಥ.

ಭಾರತದಲ್ಲಿ ಗುಣಮುಖ ಪ್ರಮಾಣ 78.90% ಇದ್ದು, ಸಾವಿನ ಪ್ರಮಾಣ 1.62%ಗೆ ಇಳಿಕೆಯಾಗಿದೆ. ಸೆಪ್ಟೆಂಬರ್ 17ರಂದು 10.06 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು 6.15 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 3.02+ ಲಕ್ಷ ಪ್ರಕರಣ (31,000+ ಸಾವು)

2. ಕರ್ನಾಟಕ: 1.03+ ಲಕ್ಷ ಪ್ರಕರಣ (7,600+ ಸಾವು)

3. ಆಂಧ್ರಪ್ರದೇಶ: 88,000+ ಪ್ರಕರಣ (5,100+ ಸಾವು)

4. ಉತ್ತರಪ್ರದೇಶ: 68,000+ ಪ್ರಕರಣ (4,700+ ಸಾವು)

5. ತಮಿಳುನಾಡು: 46,000+ ಪ್ರಕರಣ (8,600+ ಸಾವು)

6. ಚತ್ತೀಸ್​ಗಢ: 36,000+ ಪ್ರಕರಣ (628 ಸಾವು)

7. ಕೇರಳ: 34,000+ ಪ್ರಕರಣ (489 ಸಾವು)

8. ಒಡಿಶಾ: 33,000+ ಪ್ರಕರಣ (669 ಸಾವು)

9. ದೆಹಲಿ: 31,000+ ಪ್ರಕರಣ (4,800+ ಸಾವು)

10. ತೆಲಂಗಾಣ: 30,000+ ಪ್ರಕರಣ (1,000+ ಸಾವು)

-masthmagaa.com

Contact Us for Advertisement

Leave a Reply