masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 92,071 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು 1,136 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 48.46 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 79,722 ಆಗಿದೆ.

ಕಳೆದ 24 ಗಂಟೆಗಳಲ್ಲಿ 77,000+ ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 37.80 ಲಕ್ಷ ದಾಟಿದೆ. 9.86 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 78% ಇದ್ದು, ಸಾವಿನ ಪ್ರಮಾಣ 1.64%ಗೆ ಇಳಿಕೆಯಾಗಿದೆ. ಸೆಪ್ಟೆಂಬರ್ 13ರಂದು 9.78 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 5.72 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 2.90+ ಲಕ್ಷ ಪ್ರಕರಣ (29,000+ ಸಾವು)

2. ಕರ್ನಾಟಕ: 99,000+ ಪ್ರಕರಣ (7,200+ ಸಾವು)

3. ಆಂಧ್ರಪ್ರದೇಶ: 95,000+ ಪ್ರಕರಣ (4,900+ ಸಾವು)

4. ಉತ್ತರಪ್ರದೇಶ: 68,000+ ಪ್ರಕರಣ (4,400+ ಸಾವು)

5. ತಮಿಳುನಾಡು: 47,000+ ಪ್ರಕರಣ (8,300+ ಸಾವು)

6. ಒಡಿಶಾ: 31,000+ ಪ್ರಕರಣ (626 ಸಾವು)

7. ಚತ್ತೀಸ್​ಗಢ: 31,000+ ಪ್ರಕರಣ (555 ಸಾವು)

8. ತೆಲಂಗಾಣ: 30,000+ ಪ್ರಕರಣ (974 ಸಾವು)

9. ಕೇರಳ: 30,000+ ಪ್ರಕರಣ (439 ಸಾವು)

10. ದೆಹಲಿ: 28,000+ ಪ್ರಕರಣ (4,700+ ಸಾವು)

-masthmagaa.com

Contact Us for Advertisement

Leave a Reply